ವನಿತಾ ಸಿಂಗಲ್ಸ್‌ನಲ್ಲಿ ಇಗಾ ಸ್ವಿಯಾಟೆಕ್ ರಷ್ಯಾದ ಅನಾಸ್ತಾಸಿಯ ಪೊಟಪೋವಾ ಅವರಿಗೆ ಒಂದೂ ಅಂಕ ಬಿಟ್ಟುಕೊಡದೆ ಗೆಲುವು ಸಾಧಿಸಿದರು. ಅಂತರ 6-0, 6-0. ಮೊದಲ ಸೆಟ್ ಗೆಲ್ಲಲು ಸ್ವಿಯಾಟೆಕ್ ತೆಗೆದುಕೊಂಡದ್ದು ಬರೀ 19 ನಿಮಿಷ.
Advertisement
ಕೊಕೊ ಗಾಫ್ ಇಟಲಿಯ ಎಲಿಸಾಬೆಟ್ಟಾ ಕೋಕ್ಸಿಯರೆಟ್ಟೊ ವಿರುದ್ಧ 6-1, 6-2 ಅಂತರದ ಮೇಲುಗೈ ಸಾಧಿಸಿದರು. 2015ರ ಬಳಿಕ ಮೊದಲ ಫ್ರೆಂಚ್ ಓಪನ್ ಗೆಲ್ಲುವ ಅಮೆರಿಕನ್ ಆಟಗಾರ್ತಿ ಎನಿಸಿಕೊಳ್ಳುವ ಗುರಿ ಗಾಫ್ ಅವರದು. ಅಂದು ಸೆರೆನಾ ವಿಲಿಯಮ್ಸ್ ಚಾಂಪಿಯನ್ ಆಗಿದ್ದರು. ಓನ್ಸ್ ಜೆಬ್ಯೂರ್-ಡೇನ್ ಕ್ಲಾರಾ ಟೌಸನ್ ನಡುವಿನ ವಿಜೇತರನ್ನು ಕೊಕೊ ಗಾಫ್ ಎದುರಿಸಲಿದ್ದಾರೆ.
3ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಎದುರಾಳಿ ಲೊರೆಂಜೊ ಮುಸೆಟ್ಟಿ ವಿರುದ್ಧ ಜೊಕೋವಿಕ್ ಭಾರೀ ಬೆವರಿಳಿಸಿಕೊಂಡರು. ಮುಸೆಟ್ಟಿ ಇದನ್ನು 5 ಸೆಟ್ ತನಕ ಎಳೆದು ತಂದರು. ಜೊಕೋ ಗೆಲುವಿನ ಅಂತರ 7-5, 6-7 (6-8), 2-6, 6-3, 6-0. ಇವರ ಕ್ವಾರ್ಟರ್ ಫೈನಲ್ ಎದು ರಾಳಿ ಆರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂ ಡೋಲೊ. ಇನ್ನೊಂದು ಪಂದ್ಯದಲ್ಲಿ ಇವರು ಅಮೆರಿಕದ ಟಾಮಿ ಪೌಲ್ ಆಟವನ್ನು 3-6, 6-3, 6-3, 6-2ರಿಂದ ಮುಗಿಸಿದರು.
ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಕೂಡ 5 ಸೆಟ್‌ಗಳ ಹೋರಾಟವೊಂದರಲ್ಲಿ ನೆದರ್ಲೆಂಡ್ಸ್‌ನ ಟ್ಯಾಲನ್ ಗ್ರೀಕ್ಸ್‌ಪೂರ್ ಅವರನ್ನು ಮಣಿಸಿ 4ನೇ ಸುತ್ತು ತಲುಪಿದರು. ಗೆಲುವಿನ ಅಂತರ 3-6, 6-4, 6-2, 4-6, 7-6 (10-3).
Related Articles
ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕದ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬೆxನ್ ಕಠಿನ ಹೋರಾಟದ ಬಳಿಕ ಮೊದಲ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಬ್ರಝಿಲ್‌ನ ಓರ್ಲಾಂಡೊ ಲುಝ್ ಮತ್ತು ಮಾರ್ಸೆಲೊ ಝೋರ್ಮಾನ್ ವಿರುದ್ಧದ ಪಂದ್ಯವನ್ನು ಇಂಡೋ-ಆಸ್ಟ್ರೇಲಿಯನ್ ಟೆನಿಸಿಗರು 7-5, 4-6, 6-4 ಅಂತರದಿಂದ ಗೆದ್ದರು.
Advertisement
ದ್ವಿತೀಯ ಸುತ್ತಿನಲ್ಲಿ ಇವರು ಸೆಬಾಸ್ಟಿಯನ್ ಬೇಝ್ (ಆರ್ಜೆಂಟೀನಾ)-ಥಿಯಾಗೊ ಸೆಬೋತ್ ವೈಲ್ಡ್ (ಬ್ರಝಿಲ್) ವಿರುದ್ಧ ಆಡಲಿದ್ದಾರೆ.