Advertisement
10ಕ್ಕೂ ಅಧಿಕ ದೇಶ ಭಾಗಿ ಸಾಧ್ಯತೆಟೀಂ ಮಂಗಳೂರು ತಂಡದ ಸಹಭಾಗಿತ್ವದಲ್ಲಿ ಉತ್ಸವ ನಡೆಯಲಿದ್ದು,ಭಾರತ ಸೇರಿದಂತೆ ಸುಮಾರು 10ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮಲೇಷ್ಯಾ, ಇಂಡೋನೇಶ್ಯ, ಗ್ರೀಸ್, ಸ್ಪೀಡನ್, ಉಕ್ರೇನ್, ಥಾಯ್ಲೆಂಡ್, ವಿಯೇಟ್ನಾಂ, ಇಸ್ಟೋನಿಯ, ಯು.ಕೆ. ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆ ಇದೆ.
Related Articles
ಒಂದು ಗಾಳಿಪಟವನ್ನು ಎರಡು ಹಗ್ಗಗಳ ಮೂಲಕ ಹಾರಿಸಿ ಜನಾಕರ್ಷಣೆ ಪಡೆದ “ಸ್ಟಂಟ್ ಕೈಟ್’ ಈ ಬಾರಿಯ ಉತ್ಸವದಲ್ಲಿ ಮತ್ತೆ ಗಮನ ಸೆಳೆಯಲಿದೆ. ಯು.ಕೆ., ಫ್ರಾನ್ಸ್, ಥಾಯ್ಲೆಂಡ್ ಮುಂತಾದೆಡೆ ಜನಪ್ರಿಯವಾಗಿರುವ ಸ್ಟಂಟ್ ಕೈಟ್ ಇಲ್ಲಿಯೂ ಪ್ರದರ್ಶಿ ಸಲು ಸಂಬಂಧಪಟ್ಟ ತಂಡಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಅದೇ ರೀತಿ, “ರೆವಲ್ಯೂಷನ್ ಕೈಟ್’ ತಂಡವನ್ನು ಕರೆಸಲೂ ಚಿಂತನೆ ನಡೆಸಲಾಗುತ್ತಿದೆ. ಇದನ್ನು ನಾಲ್ಕು ದಾರದಲ್ಲಿ ಹಾರಿಸಿ, ಕಸರತ್ತು ಮಾಡಬಹುದು ಎನ್ನುತ್ತಾರೆ ಆಯೋಜಕರು.
Advertisement
‘ಈ ಬಾರಿಯ ಉತ್ಸವವನ್ನು ಜ. 18 ಮತ್ತು 19ರಂದು ತಣ್ಣೀರುಬಾವಿ ಬೀಚ್ನಲ್ಲಿ ಆಯೋಜಿಸಲು ಸಿದ್ಧತೆ ನಡೆದಿದೆ. ವಿವಿಧ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.’– ಸರ್ವೇಶ್ ರಾವ್, ಟೀಂ ಮಂಗಳೂರು ಸ್ಥಾಪಕರು