Advertisement

Bangladesh Liberation: ಭಾರತ- ಬಾಂಗ್ಲಾದಲ್ಲಿ ವಿಜಯ ದಿವಸ್‌

12:52 AM Dec 17, 2024 | Team Udayavani |

ಕೋಲ್ಕತಾ: 1971ರ ಯುದ್ಧದಲ್ಲಿ ಭಾರ­ತದ ಎದುರು ಪಾಕಿಸ್ಥಾನ ಮಂಡಿಯೂರಿ ಬಾಂಗ್ಲಾ ವಿಮೋಚನೆಗೆ ಕಾರಣವಾದ ದಿನದ ಸ್ಮರಣಾರ್ಥ ಡಿ.16ರಂದು ಬಾಂಗ್ಲಾ ಮತ್ತು ಭಾರತ ಎರಡೂ ದೇಶಗಳಲ್ಲಿ 54ನೇ ವಿಜಯ ದಿವಸವನ್ನು ಆಚರಿಸಲಾಗಿದೆ. ಯುದ್ಧದಲ್ಲಿ ಭಾಗಿ­ಯಾ­­ಗಿದ್ದ ಉಭಯ ರಾಷ್ಟ್ರಗಳ ನಿವೃತ್ತ ಯೋಧರು ಪರಸ್ಪರ ದೇಶಗಳಿಗೆ ಭೇಟಿ ನೀಡಿ, ಸಂಭ್ರಮದಲ್ಲಿ ಪಾಲ್ಗೊಂಡಿವೆ.

Advertisement

ಬಾಂಗ್ಲಾದ ಮುಕ್ತಿ ಜೋಧಾ ನಿಯೋ­ಗವು ಪಶ್ವಿ‌ಮ ಬಂಗಾಲದ ಕೋಲ್ಕತಾದಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಿದೆ. ಢಾಕಾದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ನಿವೃತ್ತ ಯೋಧರ ತಂಡ ಪಾಲ್ಗೊಂಡಿದೆ. ಉಭಯ ರಾಷ್ಟ್ರಗಳ ನಡುವೆ ವೈಮನಸ್ಸಾಗಿರುವಾಗಲೂ ವಿಜಯ್‌ದಿವಸ್‌ ಆಚರಣೆ ನಡೆದಿರು­ವುದು ಮಹತ್ವ ಪಡೆದಿದೆ.

1971ರಲ್ಲಿ ಅದಮ್ಯ ಧೈರ್ಯ ಪ್ರದರ್ಶಿಸಿ ಭಾರತಕ್ಕೆ ವಿಜಯದ ಕಿರೀಟ ತೊಡಿಸಿದ ನಮ್ಮ ವೀರ ಸೇನಾ ನಿಗಳು ಮತ್ತವರ ತ್ಯಾಗವನ್ನು ದೇಶ ಸದಾ ಸ್ಮರಿಸಲಿದೆ.
ದ್ರೌಪದಿ ಮುರ್ಮು, ರಾಷ್ಟ್ರಪತಿ

1971ರಲ್ಲಿ ಬಲಿದಾನ ಗೈದ, ಹೋರಾಡಿದ ಯೋಧರ ಅಸಾಧಾರಣ ಶೌರ್ಯ, ಅಚಲ ಮನೋಭಾವಕ್ಕೆ ವಿಶೇಷ ಸ್ಥಾನವಿದೆ.
ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next