Advertisement

IND-W vs WI: ವನಿತೆಯರ ಏಕದಿನ ಮುಖಾಮುಖಿ

10:29 PM Dec 21, 2024 | Team Udayavani |

ವಡೋದರ: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯನ್ನು 2-1ರಿಂದ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತದ ವನಿತೆಯರೀಗ ಏಕದಿನ ಮುಖಾಮುಖಿಗೆ ಅಣಿಯಾಗಬೇಕಿದೆ. ಸರಣಿಯ ಮೊದಲ ಪಂದ್ಯ ರವಿವಾರ ನಡೆಯಲಿದೆ.

Advertisement

ವಡೋದರದಲ್ಲಿ ನಡೆಯುವ ಈ ಪಂದ್ಯಗಳೆಲ್ಲವೂ ಹಗಲು-ರಾತ್ರಿ ಸೆಣಸಾಟವಾಗಿದ್ದು, ಅಪರಾಹ್ನ 1.30ಕ್ಕೆ ಆರಂಭವಾಗಲಿದೆ. ಭಾರತಕ್ಕೆ ಎದುರಾಗಿರುವ ಆತಂಕವೆಂದರೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಫಿಟ್‌ನೆಸ್‌ನದ್ದು. ಮಂಡಿ ಸೆಳೆತದಿಂದಾಗಿ ಅವರು ಕೊನೆಯ 2 ಟಿ20 ಪಂದ್ಯಗಳಲ್ಲಿ ಆಡಿರಲಿಲ್ಲ. ಸ್ಮತಿ ಮಂಧನಾ ತಂಡವನ್ನು ಮುನ್ನಡೆಸಿದ್ದರು. ಅಮೋಘ ಫಾರ್ಮ್ನಲ್ಲಿರುವ ಅವರು ಮೂರೂ ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದ್ದರು (54, 52, 77).

ಕಳೆದ 10 ಏಕದಿನ ಪಂದ್ಯಗಳಲ್ಲೂ ಮಂಧನಾ ಅಮೋಘ ಸಾಧನೆಗೈದಿದ್ದು, 60ರ ಸರಾಸರಿಯಲ್ಲಿ 599 ರನ್‌ ಪೇರಿಸಿದ್ದಾರೆ. ಮಂಧನಾ ಹೊರತುಪಡಿಸಿದರೆ ಜೆಮಿಮಾ ರೋಡ್ರಿಗಸ್‌ ಮತ್ತು ರಿಚಾ ಘೋಷ್‌ ಮೇಲೆ ಭರವಸೆ ಇಡಬಹುದಾಗಿದೆ. ಜೆಮಿಮಾ ಮರಳಿ

ಫಾರ್ಮ್ಗೆ ಮರಳುವ ಸೂಚನೆ ನೀಡಿದ್ದಾರೆ. ರಿಚಾ ಸ್ಫೋಟಕ ಆಟದ ಮೂಲಕ ಗಮನ ಸೆಳೆದಿದ್ದಾರೆ. ತೇಜಲ್‌ ಹಸಬಿ°ಸ್‌ ಮತ್ತು ಹಲೀìನ್‌ ದೇವಲ್‌ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬೇಕಿದೆ.

ಬೌಲಿಂಗ್‌ ವಿಭಾಗದಲ್ಲಿ ಆಲ್‌ರೌಂಡರ್‌ ದೀಪ್ತಿ ಶರ್ಮ, ರೇಣುಕಾ ಸಿಂಗ್‌ ಠಾಕೂರ್‌ ಪಾತ್ರ ನಿರ್ಣಾಯಕವಾಗಬೇಕಿದೆ. ವೆಸ್ಟ್‌ ಇಂಡೀಸ್‌ ಹ್ಯಾಲಿ ಮ್ಯಾಥ್ಯೂಸ್‌, ಡಿಯಾಂಡ್ರಾ ಡಾಟಿನ್‌ ಮತ್ತು ಶಿಮೇನ್‌ ಕ್ಯಾಂಬೆಲ್‌ ಅವರನ್ನು ಹೆಚ್ಚು ಅವಲಂಬಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next