Advertisement
ಪಶ್ಚಿಮಘಟ್ಟ ತಪ್ಪಲಿನ ಮಲೆನಾಡು ಭಾಗದ ಅರಣ್ಯಗಳಲ್ಲಿ ನಕ್ಸಲ್ ಚಟುವಟಿಕೆ ಕೆಲವು ವರ್ಷಗಳಿಂದ ಇತ್ತಾದರೂ 5-6 ತಿಂಗಳಿನಿಂದ ಅದು ಹೆಚ್ಚಾಗಿತ್ತು.ಪೀತಬೈಲಿನಲ್ಲಿ ಎಎನ್‌ಎಫ್ ಗುಂಡಿಗೆ ನಕ್ಸಲ್ ಮುಖಂಡ ವಿಕ್ರಂ ಗೌಡ ಸಾವಿಗೀಡಾದ ವೇಳೆ ಆತನ ಜತೆಗಿದ್ದವರು ಪರಾರಿಯಾ ಗಿದ್ದು, ಕಾಡಂಚಿನ ಗ್ರಾಮಸ್ಥರು ಆತಂಕ ದಲ್ಲಿದ್ದಾರೆ. ಜತೆಗೆ ಕಳ್ಳಬೇಟೆಗಾರ ನಿಗ್ರಹ ಶಿಬಿರದ ಸಿಬಂದಿಗೆ ಪ್ರಾಣ ಭಯ ಕಾಡುತ್ತಿದೆ.
Related Articles
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ 8 ಕಳ್ಳ ಬೇಟೆ ನಿಗ್ರಹ ಶಿಬಿರಗಳಿದ್ದು, 32 ಸಿಬಂದಿಯಿದ್ದಾರೆ. ಇತರೆಡೆಗಳ ಶಿಬಿರ ಗಳು ಸೇರಿ ಸುಮಾರು 110ಕ್ಕೂ ಅಧಿಕ ಮಂದಿ ಹೊರಗುತ್ತಿಗೆ ಸಿಬಂದಿ ಮಲೆನಾಡಿನ ದಟ್ಟಾರಣ್ಯದೊಳಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರಣ್ಯ ಇಲಾಖೆ ಖಾಯಂ ಸಿಬಂದಿಗೆ ಆಯು ಧ ನೀಡುತ್ತದೆ. ಸರಕಾರದ ಭದ್ರತೆಗಳಿವೆ. ಆದರೆ ಕಳ್ಳಬೇಟೆ ನಿಗ್ರಹ ಶಿಬಿರದಲ್ಲಿ ತಾತ್ಕಾಲಿಕ ನೆಲೆಯಲ್ಲಿಕೆಲಸ ಮಾಡುವ ಹೊರಗುತ್ತಿಗೆ ಸಿಬಂದಿಗೆ ಯಾವುದೇ ರಕ್ಷಣೆ, ಸೇವಾ ಭದ್ರತೆಗಳಿಲ್ಲದಿರುವುದು ಇವರನ್ನು ಸಂಕಷ್ಟಕ್ಕೆ ನೂಕಿದೆ.
Advertisement
ಜೀವದ ಹಂಗು ತೊರೆದು ಕೆಲಸಅಭಯಾರಣ್ಯದೊಳಗೆ ಇರುವ ಕಳ್ಳಬೇಟೆ ನಿಯಂತ್ರಣ ಶಿಬಿರದಲ್ಲಿದ್ದು, ಇವರಿಗೆ ಒಂದು ಕಡೆ ಕಾಡುಕಳ್ಳರ ಹಾವಳಿ ಮತ್ತೂಂದೆಡೆ ಕಾಡು ಪ್ರಾಣಿಗಳ ದಾಳಿ ಭೀತಿ. ಇದರ ನಡುವೆ ನಕ್ಸಲರ ಭೀತಿ. ಇವೆಲ್ಲದರ ಮಧ್ಯೆ ತಮ್ಮ ಕುಟುಂಬದ ನಿರ್ವಹಣೆಗೆ ಜೀವದ ಹಂಗು ತೊರೆದು ದಟ್ಟ ಕಾಡಿನಲ್ಲಿ ಗಸ್ತು ಸಂಚರಿಸುವಾಗ ಜತೆಗಿರುವುದು ಕತ್ತಿ ಹಾಗೂ ಕೋಲು ಮಾತ್ರ! ಖಾಯಂ ಸವಲತ್ತು ಇವರಿಗಿಲ್ಲ
ಸರಕಾರಿ ನೌಕರರಿಗೆ ಸಮಾನನಾಗಿ ಕೆಲಸ ಮಾಡುವ ಇವರಿಗೆ ಎಲ್ಲ ಸವಲತ್ತುಗಳು ಸಿಗಬೇಕು. ಗುತ್ತಿಗೆದಾರ ವೇತನ ಕಡಿತಗೊಳಿಸಿ ನೀಡುತ್ತಿದ್ದು, ಭವಿಷ್ಯನಿಧಿ, ಇಎಸ್‌ಐ ಸೌಕರ್ಯಗಳು ಮಾತ್ರ ಇವೆ. ಕೆಲಸ ಅವಧಿ 8 ತಾಸು ಆಗಿದ್ದರೂ ದಿನದ 24 ಗಂಟೆ ದುಡಿಸುವುದೂ ಇದೆ. ಹೀಗೆ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಸಂಬಳ ಸಿಗುತ್ತಿಲ್ಲ ಎಂಬುದು ಅವರ ದೂರು. ರಕ್ಷಣೆಗೆ ಆದ್ಯತೆ ನೀಡುತ್ತೇವೆ
ಎನ್‌ಕೌಂಟರ್‌ಬಳಿಕ ನಮ್ಮ ಎಲ್ಲ ವಿಭಾಗದ ಸಿಬಂದಿಗೆ ಎಚ್ಚರದಿಂದಿರಲು ತಿಳಿಸಲಾಗಿದೆ. ಶಿಬಿರಗಳಲ್ಲಿ ಕರ್ತವ್ಯ ನಿರ್ವಹಿಸುವವರು ಮುನ್ನೆಚ್ಚರಿಕೆ ವಹಿಸುವ ಬಗ್ಗೆ ವಿಶೇಷ ಗಮನಹರಿಸಲು ಹೇಳಲಾಗಿದೆ. ಸಿಬಂದಿ ಕೊರತೆಯೂ ನಮ್ಮಲ್ಲಿದೆ. ಡಾ| ಕರಿಕಲನ್ ವಿ., ಉಪ ಅರಣ್ಯ ಸಂರಕ್ಷಣಾಧಿಕಾರಿ
ಮಂಗಳೂರು ವಿಭಾಗ