Advertisement

MAHE: ಅಖಿಲ ಭಾರತ ಅಂತರ್‌ ವಿ.ವಿ. ವನಿತಾ ಟೆನಿಸ್‌ ಆರಂಭ

10:53 PM Dec 13, 2024 | Team Udayavani |

ಮಣಿಪಾಲ: ಶಿಕ್ಷಣ ಮತ್ತು ಕ್ರೀಡೆಗೆ ಸಮಾನ ಆದ್ಯತೆ ಸಿಗಬೇಕು. ಕ್ರೀಡೆಯು ಸಮಯದ ಸರಿಯಾದ ನಿರ್ವಹಣೆ ಹಾಗೂ ಕಠಿನ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವುದನ್ನು ಕಲಿಸುತ್ತದೆ ಎಂದು ಅಂತಾರಾಷ್ಟ್ರೀಯ ಮಾಜಿ ಟೆನಿಸ್‌ ಆಟಗಾರ್ತಿ ಡಾ| ನಯನಿಕಾ ರೆಡ್ಡಿ ಹೇಳಿದರು.

Advertisement

ಮಾಹೆ ವಿ.ವಿ.ಯ ಮರೇನಾದಲ್ಲಿ ಶುಕ್ರವಾರ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಮಟ್ಟದ ವನಿತೆಯರ ಟೆನಿಸ್‌ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.

ಸಹ ಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌, ಸಹ ಕುಲಪತಿ ಡಾ| ಶರತ್‌ ಕುಮರ್‌ ರಾವ್‌, ಅಸೋಸಿಯೇಶನ್‌ ಆಫ್ ಇಂಡಿಯನ್‌ ವಿ.ವಿ.ಯ ಪರಿ ವೀಕ್ಷಕ ಡಾ| ಭಾಸ್ಕರ್‌, ಪಂದ್ಯಾಟದ ಸಂಯೋಜಕ ಡಾ| ಉಪೇಂದ್ರ ನಾಯಕ್‌ ಉಪಸ್ಥಿತರಿದ್ದರು.

ಮಾಹೆ ಕ್ರೀಡಾ ಕೌನ್ಸಿಲ್‌ ಕಾರ್ಯ ದರ್ಶಿ ಡಾ| ವಿನೋದ್‌ ಸಿ. ನಾಯಕ್‌ ಸ್ವಾಗತಿಸಿದರು. ಮುಖ್ಯ ತೀರ್ಪುಗಾರ ಗೌರಂಗ್‌ ನಲ್ವಾಯ ಅವರು ಪಂದ್ಯಾಟದ ಬಗ್ಗೆ ವಿವರ ನೀಡಿದರು. ಡಾ| ಮೋನಿಕಾ ವಂದಿಸಿ, ಡಾ| ರೀನಾ ನಿರೂಪಿಸಿದರು. ದೇಶದ 4ವಲಯಗಳ ತಲಾ 4 ತಂಡದಂತೆ 16 ತಂಡಗಳು ಡಿ. 16ರ ವರೆಗೆ ಮಾಹೆಯ ಟೆನಿಸ್‌ ಮೈದಾನದಲ್ಲಿ ಸೆಣಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next