Advertisement

ನಕ್ಸಲ್‌ ನಿಗ್ರಹಕ್ಕೆ ಸಿಆರ್‌ಪಿಎಫ್ ಮಹಿಳಾ ‘ಕೋಬ್ರಾ’ರೆಡಿ

10:19 PM Feb 06, 2021 | Team Udayavani |

ಗುರುಗಾಂವ್‌: ಸಿಆರ್‌ಪಿಎಫ್  34 ಮಹಿಳಾ ಸೈನಿಕರನ್ನೊಳಗೊಂಡ ಮೊದಲ ತುಕಡಿಯನ್ನು ವಿಶೇಷ ಅರಣ್ಯ ಸಮರ ಕಮಾಂಡೋ ಪಡೆ “ಕೋಬ್ರಾ’ಗೆ ಅಧಿಕೃತವಾಗಿ ಸಂಯೋಜಿಸಲಾಗಿದೆ. ಈ ತುಕಡಿ ಮುಂಬರುವ ದಿನಗಳಲ್ಲಿ ದೇಶದಲ್ಲಿನ ನಕ್ಸಲ್‌ ನಿಗ್ರಹ ಕಾರ್ಯಾಚರಣೆಗೆ ಬಳಕೆಯಾಗಲಿದೆ.

Advertisement

ಕಾದಾರ್‌ಪುರ ಹಳ್ಳಿಯಲ್ಲಿನ ಕೋಬ್ರಾ ಕ್ಯಾಂಪ್‌ನಲ್ಲಿ ತುಕಡಿ ಪದಗ್ರಹಣ ಸಮಾರಂಭಕ್ಕೆ ಸಿಆರ್‌ಪಿಎಫ್ ನ ಪ್ರಧಾನ ನಿರ್ದೇಶಕಿ ಎ.ಪಿ. ಮಹೇಶ್ವರಿ ಚಾಲನೆ ನೀಡಿದರು. ಕೋಬ್ರಾದಲ್ಲಿ ಈಗಾಗಲೇ ಇದ್ದ 6 ಮಹಿಳಾ ಸಿಬ್ಬಂದಿಯನ್ನು ಈ ತುಕಡಿಗೆ ಸೇರಿಸಲಾಗಿದೆ.

3 ತಿಂಗಳ ಕಠಿಣ ತರಬೇತಿ ಬಳಿಕ ನಕ್ಸಲ್‌ ಪೀಡಿತ ಪ್ರದೇಶಗಳಾದ ಛತ್ತೀಸ ಗಡ, ಸುಕ್ಮಾ, ದಂತೇ ವಾಡ, ಬಿಜಾಪುರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

2009ರಿಂದ ಆರಂಭಗೊಂಡ, ಸಿಆರ್‌ಪಿಎಫ್ ನ ಅಂಗ ಘಟಕ ಕೋಬ್ರಾ ಮುಖ್ಯವಾಗಿ ಅರಣ್ಯದೊಳಗಿನ ನಕ್ಸಲ್‌ ಚಟುವಟಿಕೆ ನಿಗ್ರಹ ಮತ್ತು ಗುಪ್ತಚರ ಹೊಣೆಗಾರಿಕೆ ಹೊಂದಿದೆ.

ಇದನ್ನೂ ಓದಿ:ರೈಲ್ವೆಯ “ಐಆರ್‌ಸಿಟಿಸಿ’ ಮೂಲಕ ಇನ್ನು ಬಸ್‌ ಬುಕಿಂಗ್‌ಗೂ ಅವಕಾಶ

Advertisement
Advertisement

Udayavani is now on Telegram. Click here to join our channel and stay updated with the latest news.

Next