Advertisement

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ

01:29 AM Dec 23, 2024 | Team Udayavani |

ಬಿಜಾಪುರ: ಛತ್ತೀಸ್‌ಗಢದಲ್ಲಿ 10 ವರ್ಷಗಳಲ್ಲಿ ನಕ್ಸಲ್‌ ಪ್ರಭಾವ ಹೊಂದಿರುವ ಪ್ರದೇಶಗಳ ವ್ಯಾಪ್ತಿಯು ಗಣನೀಯವಾಗಿ ಕುಸಿತ ಕಂಡಿದೆ. 18000 ಚ. ಕಿ.ಮೀ. ಪ್ರದೇಶದಲ್ಲಿದ್ದ ನಕ್ಸಲರ ಪ್ರಭಾವ ಕ್ರಮೇಣ ಕುಂದುತ್ತಾ ಬಂದಿದ್ದು, ಈಗ ಕೇವಲ 8500 ಚ.ಕಿ.ಮೀ. ಪ್ರದೇಶಕ್ಕೆ ಅವರು ಸೀಮಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

2026ರ ಮಾರ್ಚ್‌ನೊಳಗೆ ದೇಶವನ್ನು ನಕ್ಸಲ್‌ ಮುಕ್ತಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶಪಥ ಮಾಡಿರುವಂತೆಯೇ ಈ ಮಾಹಿತಿ ಹೊರಬಿದ್ದಿದೆ.

ಪ್ರಸ್ತುತ ಛತ್ತೀಸ್‌ಗಡದ ಕೇವಲ 5 6 ಜಿಲ್ಲೆಗಳಿಗೆ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶಗಳಿಗಷ್ಟೇ ಮಾವೋವಾದಿಗಳು ಸೀಮಿತರಾಗಿದ್ದು, 2026ರ ಮಾರ್ಚ್‌ನೊಳಗೆ ಈ ಪ್ರದೇಶಗಳನ್ನೂ ನಮ್ಮ ವಶಕ್ಕೆ ಪಡೆಯುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ವರ್ಷ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಫ‌ಲವಾಗಿ 287 ನಕ್ಸಲರನ್ನು ಹತ್ಯೆಗೈಯ್ಯಲಾಗಿದ್ದು, 992 ಮಂದಿಯನ್ನು ಬಂಧಿಸಲಾಗಿದೆ. 837 ಮಂದಿ ಶರಣಾಗಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next