Advertisement

Sambhal :ಉದ್ವಿಗ್ನತೆಯ ನಡುವೆ ಮಸೀದಿ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನ

01:39 PM Dec 15, 2024 | Team Udayavani |

ಸಂಭಾಲ್ : ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಉದ್ವಿಗ್ನತೆಯ ನಡುವೆ, ಜಿಲ್ಲಾಡಳಿತವು ರವಿವಾರ (ಡಿ15 ) ಬೆಳಗ್ಗೆ ಸಾರ್ವಜನಿಕ ಸ್ಥಳಗಳಲ್ಲಿರುವ ಅಕ್ರಮ ಕಟ್ಟಡಗಳ ತೆರವುಗೊಳಿಸಲು ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸುತ್ತಿದೆ.

Advertisement

ಸಂಭಾಲ್ ಎಸ್‌ಡಿಎಂ ವಂದನಾ ಮಿಶ್ರಾ ಅವರ ಪ್ರಕಾರ, ಸಾರ್ವಜನಿಕ ಪ್ರದೇಶಗಳಲ್ಲಿನ ಅತಿಕ್ರಮಣ ಕಟ್ಟಡಗಳನ್ನು ತೆರವುಗೊಳಿಸುವ ಉದ್ದೇಶದಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದು, ಇದನ್ನು ಕಳೆದ ಎರಡು ತಿಂಗಳಿನಿಂದ ಚಂದೌಲಿಯಲ್ಲಿ ಸಕ್ರಿಯವಾಗಿ ಕಾರ್ಯಗತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

“ಸಂಭಾಲ್‌ನಲ್ಲಿ ವಿದ್ಯುತ್ ಕಳ್ಳತನದ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ.ಶನಿವಾರ ಬೆಳಗ್ಗೆ ಶಾಹಿ ಜಾಮಾ ಮಸೀದಿ ಪ್ರದೇಶದಲ್ಲಿ ಅತಿಕ್ರಮಣ ತಡೆ ಅಭಿಯಾನ ನಡೆಸಲಾಗಿದೆ” ಎಂದು ಎಸ್‌ಡಿಎಂ ವಂದನಾ ಮಿಶ್ರಾ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ರಾಜೇಂದರ್ ಪೆನ್ಸಿಯಾ ಮಾತನಾಡಿ, ‘ಬೆಳಗ್ಗೆ ಧ್ವನಿವರ್ಧಕಗಳಿಂದ ಅನಾವಶ್ಯಕ ಶಬ್ದ ಮಾಲಿನ್ಯ ಆಗುತ್ತಿದೆಯೇ ಎಂದು ಪರಿಶೀಲಿಸಲು ಬಂದಿದ್ದೆವು.ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಕಳ್ಳತನ ಆಗುತ್ತಿರುವುದು ಕಂಡುಬಂದಿದೆ.ಸುಮಾರು 15ರಿಂದ 20 ಮನೆಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ವಿದ್ಯುತ್ ಕಳ್ಳತನ ನಡೆಯುತ್ತಿದೆ. ನಾವು ಮಸೀದಿಯನ್ನು ಪರಿಶೀಲಿಸಿದಾಗ 59 ಫ್ಯಾನ್‌ಗಳು, ಒಂದು ಫ್ರಿಜ್, ವಾಷಿಂಗ್ ಮೆಷಿನ್ ಮತ್ತು ಸುಮಾರು 25 ರಿಂದ 30 ಲೈಟ್ ಪಾಯಿಂಟ್‌ಗಳು ಮತ್ತು ಮೀಟರ್‌ಗಳನ್ನು ಕಂಡುಕೊಂಡಿದ್ದೇವೆ. ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

Advertisement

ಪುನಃ ತೆರೆಯಲಾದ ದೇವಾಲಯದಲ್ಲಿ ಆರತಿ
ಸಂಭಾಲ್‌ನಲ್ಲಿ ಇತ್ತೀಚೆಗೆ ಪುನಃ ತೆರೆಯಲಾದ ಶಿವ ಮತ್ತು ಹನುಮಾನ್ ದೇವಾಲಯದಲ್ಲಿ ರವಿವಾರ ಬೆಳಗ್ಗೆ ಆರತಿಯನ್ನು ಮಾಡಲಾಯಿತು. ಸಂಭಾಲ್ ಜಿಲ್ಲೆಯಲ್ಲಿ ದಶಕಗಳ ನಂತರ ತೆರೆಯಲಾದ ಶಿವ ಮತ್ತು ಹನುಮಾನ್ ದೇವಾಲಯದ ಹೊರಗೆ ಪೊಲೀಸ್ ಸಿಬಂದಿ ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ವಿದ್ಯುತ್ ಕಳ್ಳತನದ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಶನಿವಾರ ನಡೆಸುತ್ತಿರುವ ತಪಾಸಣೆಯಲ್ಲಿ ದೇವಾಲಯವನ್ನು ಪತ್ತೆ ಮಾಡಿದ ನಂತರ ಇದು ನಡೆದಿದೆ.

1978 ರ ನಂತರ ಸುಮಾರು 400 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಪುನಃ ತೆರೆಯಲಾಗಿದೆ ಎಂದು ನಗರ ಹಿಂದೂ ಸಭಾದ ಧರ್ಮದರ್ಶಿ ವಿಷ್ಣು ಶರಣ್ ರಸ್ತೋಗಿ ಹೇಳಿದ್ದಾರೆ. ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next