Advertisement

ವಾಷಿಂಗ್ಟನ್‌ನಲ್ಲಿ ಪ್ರವಾಹ; ವೈಟ್‌ ಹೌಸ್‌ಗೂ ನುಗ್ಗಿದ ನೀರು

10:42 AM Jul 10, 2019 | Vishnu Das |

ವಾಷಿಂಗ್ಟನ್‌: ಅಮೆರಿಕದ ರಾಜಧಾನಿ ಸುತ್ತಮುತ್ತ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖ ನಗರಗಳು ಮತ್ತು ಶ್ವೇತಭವನದ ಸುತ್ತ ತಗ್ಗು ಪ್ರದೇಶಗಳೆಲ್ಲವೂ ಸೋಮವಾರ ನೆರೆ ನೀರಿನಿಂದ ಆವೃತ್ತವಾಗಿದದ್ದವು.

Advertisement

ವಾಷಿಂಗ್ಟನ್‌ ಡಿ.ಸಿ. ಸುತ್ತಮುತ್ತ ರಸ್ತೆಗಳಲ್ಲಿ ನೀರು ನಿಂತಿದ್ದು ನೂರಾರು ಕಾರುಗಳು ನೀರಿನಲ್ಲಿ ಮುಳುಗಿವೆ. ಕೆಲ ಕಾರು ಗಳು ಕೊಚ್ಚಿ ಹೋಗಿವೆ.

ಕೊಲಂಬಿಯಾ, ವರ್ಜೀನಿಯಾ ಭಾಗಗಗಳಲ್ಲಿ ಭಾರೀ ಮಳೆಯಾಗುತ್ತಿದೆ. 3 ಇಂಚಿನಷ್ಟು ಮಳೆಯಾಗಿದೆ ಎಂದು ವರದಿಯಾಗಿದೆ.

ಹಲವು ಭಾಗಗಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೆಟ್ರೋ  ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ರಕ್ಷಣಾ ತಂಡಗಳು ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next