Advertisement

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

04:22 AM Dec 22, 2024 | Team Udayavani |

ಬೆಂಗಳೂರು: ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ಬೆಂಗಳೂರಿನಲ್ಲಿರುವ ಒನ್‌ 8 ಕಮ್ಯೂನ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯದೆ ಕಾನೂನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್‌ ನೀಡಿದೆ.

Advertisement

ಬೆಂಗಳೂರಿನಲ್ಲಿರುವ ಒನ್‌ 8 ಕಮ್ಯೂನ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯಲಿಲ್ಲ ಎಂಬ ವಿಚಾರ ಬಿಬಿಎಂಪಿ ಗಮನಕ್ಕೆ ಬರುತ್ತಿದ್ದಂತೆ ಕಳೆದ ಒಂದು ವಾರದ ಹಿಂದೆ ನೋಟಿಸ್‌ ಕೊಡಲಾಗಿದೆ. ನೋಟಿಸ್‌ಗೆ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸೋಮವಾರದೊಳಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ ಮತ್ತೂಂದು ನೋಟಿಸ್‌ ಕೊಡಲಾಗವುದು. ಅದಕ್ಕೂ ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಬಿಬಿಎಂಪಿ ಮುಖ್ಯ ಆಯುಕ್ತರು ಏನನ್ನುತ್ತಾರೆ?:
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಕಾನೂನು ನಿಯಮ ಉಲ್ಲಂ ಸಿರುವುದಕ್ಕೆ ನೋಟಿಸ್‌ ನೀಡುವ ವೇಳೆ ಇದು ಯಾರ ಮಾಲಿಕತ್ವದಲ್ಲಿದೆ ಎಂಬುದನ್ನು ನಾವು ನೋಡುವುದಿಲ್ಲ. ನಮ್ಮ ಖಾತೆಯಲ್ಲಿ ಅಥವಾ ಯಾರ ಹೆಸರಿನಲ್ಲಿ ಪರವಾನಗಿ ನೀಡಲಾಗಿದೆ ಎಂಬುದನ್ನು ನೋಡಿಕೊಂಡು ಆ ಪ್ರಕಾರ ನೋಟಿಸ್‌ ಕೊಡಲಾಗುತ್ತದೆ.

ಎಂ.ಜಿ. ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಎದುರುಗಡೆ ಕಟ್ಟಡವೊಂದರ ಮೇಲೆ ರೆಸ್ಟೋರೆಂಟ್‌ ನಡೆಯುತ್ತಿದೆ. ಕಟ್ಟಡದಲ್ಲಿ ನಿಯಮ ಉಲ್ಲಂ ಸಿದ್ದಕ್ಕೆ ನೋಟಿಸ್‌ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಪೀಲ್‌ಗಾಗಿ ನಮ್ಮ ಬಳಿ ಬಂದಿದ್ದಾರೆ. ಆ ಅಪೀಲ್‌ಗೆ ಸ್ಟೇ ಇದೆ ಎಂದು ತಿಳಿದು ಬಂದಿದೆ. ನಮ್ಮ ಬಳಿ ಅಪೀಲ್‌ ಇದ್ದರೆ, ಎಲ್ಲರಿಗೂ ಅನ್ವಯವಾಗುವಂತೆ ಅಪೀಲ್‌ನಲ್ಲಿ ಆರ್ಡರ್‌ ಪಾಸ್‌ ಮಾಡುತ್ತೇವೆ. ಅಪೀಲ್‌ ವಿಚಾರಣೆ ನಡೆದ ಬಳಿಕ ನಾವು ಅಂತಿಮ ಆದೇಶ ನೀಡಲಾಗುವುದು. ಒಂದು ವೇಳೆ ಅಪೀಲ್‌ ರದ್ದುಪಡಿಸಿದರೆ ಸಂಬಂಧಿಸಿದ ಕಟ್ಟಡ ಒಡೆಯಲು ಕ್ರಮ ಕೈಗೊಳ್ಳಬೇಕು. ಅಪೀಲ್‌ ಸ್ವೀಕಾರವಾದರೆ ನಮ್ಮ ಸಿಬ್ಬಂದಿ ಅದರ ಪ್ರಕಾರ ನಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಹಿಂದೆಯೂ ನೋಟಿಸ್‌ ಜಾರಿ
ಸಾಮಾಜಿಕ ಕಾರ್ಯಕರ್ತ ವೆಂಕಟೇಶ್‌ ಎಂಬುವರು ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರು. ದೂರು ಆಧರಿಸಿ ಶಾಂತಿನಗರ ಪಾಲಿಕೆ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ಈ ಹಿಂದೆ ಕೂಡ ಒಂದು ಬಾರಿ ನೋಟಿಸ್‌ ನೀಡಿದ್ದರೂ ವಿರಾಟ್‌ ಕೊಹ್ಲಿ ಮಾಲಿಕತ್ವದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಉತ್ತರಿಸದೇ ನಿರ್ಲಕ್ಷ್ಯ ವಹಿಸಿತ್ತು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next