ಬೆಂಗಳೂರು: ಇತ್ತೀಚೆಗೆ ಬಿಗ್ ಬಾಸ್ (Bigg Boss Kannada-11) ಮನೆಯಿಂದ ಅರ್ಧದಲ್ಲೇ ಆಚೆ ಬಂದಿದ್ದ ಗೋಲ್ಡ್ ಸುರೇಶ್ (Gold Suresh) ಮತ್ತೆ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.
ಕಳೆದ ವಾರ ಶಿಶಿರ್ ಎಲಿಮಿನೇಟ್ ಆಗಿದ್ದರು. ಇವರ ಜತೆ ಗೋಲ್ಡ್ ಸುರೇಶ್ ಅವರು ವೈಯಕ್ತಿಕ ಕಾರಣದಿಂದ ಬಿಗ್ ಬಾಸ್ ಮನೆ ಬಿಟ್ಟು ಆಚೆ ಬಂದಿದ್ದರು. ವೀಕ್ಷಕರು ಸುರೇಶ್ ಅವರ ನಿರ್ಗಮನದಿಂದ ಶಾಕ್ ಆಗಿದ್ದರು.
ಸುರೇಶ್ ಮನೆಯಿಂದ ಆಚೆ ಬಂದ ಹಿಂದಿನ ಕಾರಣದ ಬಗ್ಗೆ ಚರ್ಚೆಗಳಾಗಿತ್ತು. ನಾನಾ ರೀತಿಯ ವದಂತಿಗಳು ಹಬ್ಬಿತ್ತು. ಈ ಕುರಿತು ಸುರೇಶ್ ಅವರೇ ಲೈವ್ ಬಂದು ಎಲ್ಲ ಗೊಂದಲಕ್ಕೆ ತೆರೆ ಎಳೆದಿದ್ದರು.
ಇದನ್ನೂ ಓದಿ: BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
“ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ನನ್ನ ಪತ್ನಿಗೆ ನನ್ನ ಬ್ಯುಸಿನೆಸ್ ನೋಡಿಕೊಳ್ಳಲು ಹೇಳಿ ಹೋಗಿದ್ದೆ. ನಾನು ನನ್ನದೇ ಆದ ಬ್ಯುಸಿನೆಸ್ ಮಾಡುತ್ತಿದ್ದೇನೆ. ಅದನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಆದರೆ ನನ್ನ ಪತ್ನಿಗೆ ಬ್ಯುಸಿನೆಸ್ ಹ್ಯಾಂಡಲ್ ಮಾಡಲು ಆಗಿಲ್ಲ. ಕೆಲಸ ಒತ್ತಡದಿಂದಾಗಿ ಅದು ಅವರಿಂದ ಸಾಧ್ಯವಾಗಿಲ್ಲ. ಅವರಿಗೆ ಗೊಂದಲ ಉಂಟಾಗಿತ್ತು. ಹಾಗಾಗಿ ನಾನು ಹೊರಗೆ ಬಂದು ಅದನ್ನು ನೋಡಿಕೊಳ್ಳಬೇಕಿತ್ತು. ಹಾಗಾಗಿ ಹೊರಗಡೆ ಬರಬೇಕಾಯಿತು ಎಂದು ಸುರೇಶ್ ಹೇಳಿದ್ದರು.
ಇದೀಗ ಸುರೇಶ್ ಅವರು ಮತ್ತೆ ಬಿಗ್ ಬಾಸ್‌ಗೆ ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಗ್ ಬಾಸ್ ಅಂದರೆ ದೊಡ್ಮನೆಗೆ ಅಲ್ಲ. ಬಿಗ್ ಬಾಸ್ ವೇದಿಕೆಗೆ ಸುರೇಶ್ ಅವರು ಬರಲಿದ್ದಾರೆ ಎನ್ನಲಾಗಿದೆ. ಕಿಚ್ಚ ಅವರ ಜತೆ ಸುರೇಶ್ ಅವರು ಮಾತನಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಂದ ಹಾಗೆ ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎನ್ನಲಾಗಿದೆ. ತ್ರಿವಿಕ್ರಮ್ ಅವರ ಜತೆ ಪ್ರ್ಯಾಂಕ್ ಎಲಿಮಿನೇಷನ್ ನಡೆಯಲಿದೆ ಎನ್ನಲಾಗಿದೆ.