Advertisement

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

11:41 AM Dec 22, 2024 | Team Udayavani |

ಬೆಂಗಳೂರು: ಅದ್ಧೂರಿತನದಿಂದಲೇ ವಿಶ್ವದಲ್ಲಿ ಗುರುತಿಸಿಕೊಂಡಿರುವ ಭಾರತದ ಮದುವೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ. ದಾಖಲೆ ಇಲ್ಲದ ಹಣವನ್ನು ಮದುವೆಗಳಲ್ಲಿ ಖರ್ಚು ಮಾಡಲಾಗುತ್ತಿದೆ ಎಂಬ ಶಂಕೆಯ ಮೇಲೆ ಐಟಿ ಇಲಾಖೆ ತನಿಖೆ ಆರಂಭಿಸಿದೆ.

Advertisement

ಈಗಾಗಲೇ ರಾಜಸ್ಥಾನದಲ್ಲಿನ 20ಕ್ಕೂ ಹೆಚ್ಚು “ಮದುವೆ ಆಯೋಜಕ’ ಸಂಸ್ಥೆಗಳ ಮೇಲೆ ತನಿಖೆ ಆರಂಭಗೊಂಡಿದ್ದು, 7500 ಕೋಟಿ ರೂ.ನಷ್ಟು ದಾಖಲೆಯಿಲ್ಲದ ಹಣ ಬಳಕೆಯಾಗಿದೆ. ಇದಕ್ಕಾಗಿ ನಕಲಿ ಖರ್ಚಿನ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಹವಾಲಾ ಮೂಲಕ ಹಣ ವರ್ಗಾವಣೆ ಮಾಡಿ ಅದ್ಧೂರಿ ಮದುವೆ ಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಬೆಂಗಳೂರು, ಹೈದಾರಾ ಬಾದ್‌ ಮೂಲದ ಸಂಸ್ಥೆಗಳು ಭಾಗಿಯಾಗಿವೆ ಎಂದು ಇ.ಡಿ. ಹೇಳಿದೆ.

ಈ ವಾರದ ಆರಂಭದಲ್ಲಿ ಈ ತನಿಖೆ ಆರಂಭಿಸಲಾಗಿದ್ದು, ಮುಂದಿನ ಕೆಲದಿನಗಳವರೆಗೆ ಮುಂದುವರಿಯಲಿದೆ. ವಿದೇಶಗಳಲ್ಲಿ ನಡೆಯುವ ಮದುವೆಗಳು, ಮದುವೆಗಾಗಿ ಖಾಸಗಿ ವಿಮಾನ ಬಳಕೆಯಂತಹ ಘಟನೆಗಳನ್ನು ಪ್ರಮುಖವಾಗಿ ತನಿಖೆಯ ಭಾಗವಾಗಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next