Advertisement
ಉತ್ತಮ ಬೋಧನಾ ವಿಧಾನ ಅಳವಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ಲಸ್ಟರ್ ಹಂತದಲ್ಲಿಉತ್ತಮ ಬೋಧಿಸುವವರನ್ನು ಗುರುತಿಸಿ ಅನಂತರ ತಾಲೂಕು, ಜಿಲ್ಲೆ, ರಾಜ್ಯ ಎಂದು ಗುರುತಿಸಲಾಗುವುದು. ಬಳಿಕ ಉತ್ತಮ ಶಿಕ್ಷಕರನ್ನು ವಿಷಯ ರಾಯಭಾರಿಯನ್ನಾಗಿ ಮಾಡಲಾಗುವುದು ಎಂದರು. ಶಾಸಕ ಕೆ. ವಸಂತ ಬಂಗೇರ, ಜಿ.ಪಂ. ಸದಸ್ಯರಾದ ಸಾಹುಲ್ ಹಮೀದ್, ಧರಣೇಂದ್ರ ಪಿ., ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್, ಜಿ.ಪಂ. ಮಾಜಿ ಸದಸ್ಯ ರಾಜಶೇಖರ ಅಜ್ರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಸರಕಾರಿ 43,000 ಪ್ರಾಥಮಿಕ ಶಾಲೆಗಳು, 5,900 ಪ್ರೌಢ ಶಾಲೆಗಳು, 1,203 ಪದವಿ ಪೂರ್ವ ಕಾಲೇಜುಗಳು ಇವೆ. ಒಟ್ಟು 76,000 ಶಾಲೆಗಳಿದ್ದು 1.16 ಕೋಟಿ ಮಕ್ಕಳು ಕಲಿಯುತ್ತಿದ್ದಾರೆ. 3,600 ಕ್ಲಸ್ಟರ್‌ಗಳಿವೆ.