Advertisement

Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್‌

12:22 AM Jan 05, 2025 | Team Udayavani |

ಮೈಸೂರು: “ಹಿಂದಿ ಭಾಷೆ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಮಾಧ್ಯಮವೂ ಆಗಿದ್ದು, ಹಿಂದಿಯನ್ನು ಸಂವಾದದ ಭಾಷೆಯನ್ನಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ’.ಹೀಗೆಂದು ಹೇಳಿರುವುದು ಕೇಂದ್ರ ಗೃಹ ವ್ಯವ ಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್‌.

Advertisement

ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯ ಘಟಿಕೋತ್ಸವ ಭವನದಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಭಾಷಾ ವಿಭಾಗ ಶನಿವಾರ ಆಯೋಜಿಸಿದ್ದ ದಕ್ಷಿಣ ಹಾಗೂ ನೈಋತ್ಯ ವಿಭಾಗದ ಅಧಿಕೃತ ಭಾಷಾ ಸಮ್ಮೇಳನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಮತ್ತು ಜಗತ್ತಿನಲ್ಲಿ ಹಿಂದಿ ಭಾಷೆ ತನ್ನದೇ
ಆದ ಸ್ಥಾನ ಹೊಂದಿದೆ. ಹಿಂದಿಯನ್ನು ಸಂವಾದದ ಭಾಷೆಯನ್ನಾಗಿ ಮಾಡಲು ನಾವು ಸಂಕಲ್ಪ ಮಾಡಿ ದ್ದೇವೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಭಾಷೆಗಳನ್ನು ಮಾತನಾಡುವ ದಕ್ಷಿಣ ಭಾರತದಲ್ಲಿ ಹಿಂದಿಯೂ ಪ್ರಮುಖ ಭಾಷಾ ಮಾಧ್ಯಮವಾಗಿದೆ. ಇದು ಜನರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂವಾದದಲ್ಲಿ ಭಾಗವಹಿ ಸಲು ಅವಕಾಶ ಕಲ್ಪಿಸುತ್ತದೆ ಎಂದು ಸಚಿವರು ಹೇಳಿದರು.

ಮಾತೃಭಾಷೆ ಜತೆಗೆ ಹಿಂದಿಗೆ ಒತ್ತು
ಕೇಂದ್ರ ಸರಕಾರವು ಹಿಂದಿಯ ಜತೆಗೆ ಮಾತೃ ಭಾಷಾ ಕಲಿಕೆ ಹಾಗೂ ಅಭಿವೃದ್ಧಿಗೆ ಮಹತ್ವ ನೀಡಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗಳಿಗೂ ಆದ್ಯತೆ ಕೊಡಲಾಗಿದೆ ಎಂದು ಹೇಳಿದ ಅವರು, ರಾಷ್ಟ್ರೀಯ ಏಕೀಕರಣದಲ್ಲಿ ಹಿಂದಿ ಪಾತ್ರ ದೊಡ್ಡದು. ಮಹಾತ್ಮಾ ಗಾಂಧಿ ಅವರೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಸ್ಥಾಪಿಸಿದ್ದರು ಎಂದು ಸ್ಮರಿಸಿದರು.

ಅಧಿಕೃತ ಭಾಷಾ ಇಲಾಖೆಯು ಕಂಠಸ್ಥ, ಲೀಲಾ ಆಪ್‌, ಇ-ಮಹಾ ಶಬ್ದ ಸಿಂಧು ಇತ್ಯಾದಿಗಳನ್ನು ಒಳಗೊಂಡಿರುವ ತಾಂತ್ರಿಕ ಅಭಿವೃದ್ಧಿಯಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತಿದೆ. ಇದರ ಮೂಲಕ ಯಾವುದೇ ಭಾರತೀಯ ಭಾಷೆಯಲ್ಲಿರುವ ಯಾವುದೇ ಅಕ್ಷರವನ್ನು ಬಹು ಭಾಷೆಗಳಿಗೆ ತತ್‌ಕ್ಷಣವೇ ಅನುವಾದಿಸಬಹುದು. ಇದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವೆ 15 ಭಾರತೀಯ ಭಾಷೆಗಳಲ್ಲಿ ಅವರ ಮೊದಲ ಅಧಿಕೃತ ಭಾಷೆ
ಯಲ್ಲಿ ಪತ್ರ ವ್ಯವಹಾರವನ್ನು ಸಕ್ರಿಯಗೊಳಿಸುತ್ತದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next