Advertisement

Bajpe: ಇನ್ಮುಂದೆ ದೀಪಗಳಿಂದ ಬೆಳಗ‌ಲಿದೆ ವಿಮಾನ ನಿಲ್ದಾಣ ರಸ್ತೆ

02:21 PM Jan 10, 2025 | Team Udayavani |

ಬಜಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮರಕಡದ ಸಮೀಪದ ಮಂಗಳೂರು ಮಹಾನಗರ ಪಾಲಿಕೆಯ ದ್ವಾರದ ಬಳಿಯಿಂದ ಮಂಗಳೂರು ವಿಮಾನ ನಿಲ್ದಾಣದ ಆಗಮನ ದ್ವಾರದ ತನಕ ರಸ್ತೆ ಡಿವೈಡರ್‌ನಲ್ಲಿ ದಾರಿದೀಪದ ಕಂಬಗಳು ಹಾಕಲಾಗಿದ್ದು, ಇನ್ನೂ ದೀಪ ಹಾಗೂ ಅದಕ್ಕೆ ವಿದ್ಯುತ್‌ ಸಂಪರ್ಕದ ವ್ಯವಸ್ಥೆಯನ್ನು ಕಲ್ಪಿಸಲು ಬಾಕಿ ಇದೆ.

Advertisement

ಈಗಾಗಲೇ ಉದಯವಾಣಿ ಸುದಿನ ಮರವೂರು ಸೇತುವೆ ಕತ್ತಲು ಇದರಿಂದ ಆಗುವ ಅಪಘಾತಗಳ ಬಗ್ಗೆ ಗಮನ ಸೆಳೆದಿತ್ತು. ಈ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರ ಎಚ್ಚೆತ್ತುಕೊಂಡು ಬಳಿಕ ಈ ಕಾಮಗಾರಿಯನ್ನು ಶುರು ಮಾಡಿದೆ. ರಾತ್ರಿಯಿಡೀ ವಾಹನ ಸಂಚಾರ, ವಿಮಾನ ನಿಲ್ದಾಣದಿಂದ ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ವಾಹನಗಳು ಸಂಚರಿಸುತ್ತಿದು,ª ಈ ಪ್ರದೇಶವೇ ಕತ್ತಲಲ್ಲಿರುವುದು ಪ್ರಯಾಣಿಕರ ವಾಹನಗಳಿಗೆ ಸಮಸ್ಯೆಯಾಗಿತ್ತು.

ಹೊಸ ಮಾದರಿಯ ದಾರಿದೀಪ ಕಂಬ ಅಳವಡಿಕೆ
ಮಂಗಳೂರು ಮಹಾನಗರ ದ್ವಾರದಿಂದ ಮರವೂರು ಸೇತುವೆ ತನಕ 9. ಆ ಬಳಿಕ ರೈಲ್ವೇ ಸೇತುವೆ ತನಕ 20, ಅಲ್ಲಿಂದ ವಿಮಾನ ನಿಲ್ದಾಣ ನಿರ್ಗಮನ ದ್ವಾರದ ತನಕ 4, ಅಲ್ಲಿಂದ 24 ದಾರಿದೀಪ ಕಂಬಗಳನ್ನು ಆಗಮನ ದ್ವಾರದ ತನಕ ಹಾಕಲಾಗಿದೆ. ಒಟ್ಟು 57 ದಾರಿದೀಪ ಕಂಬಗಳನ್ನು ಹಾಕಲಾಗಿದೆ.

ಮರವೂರು ಸೇತುವೆಯಲ್ಲಿ ದಾರಿದೀಪದ ವ್ಯವಸ್ಥೆಯ ಬಗ್ಗೆ ಇನ್ನೂ ಕಾಮಗಾರಿ ನಡೆಯಬೇಕಾಗಿದೆ. ಈ ದಾರಿದೀಪಗಳ ಕಂಬಗಳೇ ಈಗ ಹೊಸ ಮೆರಗನ್ನು ವಿಮಾನ ನಿಲ್ದಾಣ ರಸ್ತೆಗೆ ನೀಡುತ್ತಿದ್ದು, ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಈ ದಾರಿದೀಪವೂ ಹೆಚ್ಚು ಅನುಕೂಲಕರವಾಗಲಿದೆ. ಆಶಾದಾಯಕ ಭಾವನೆಯು ಮೂಡುತ್ತಿದೆ.

ಮರವೂರು ಹಳೆ ಸೇತುವೆಗೆ ಹೊಸ ಸೇತುವೆ ಯಾವಾಗ?
ಮರವೂರು ಹಳೆ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧವಾಗಿದ್ದು ಹೊಸ ಸೇತುವೆಯಲ್ಲಿಯೇ ವಾಹನಗಳು ಸಂಚಾರ ಮಾಡುತ್ತಿವೆ. ಹಳೆ ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಿಲ್ಲವಾದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು. ಈಗ ಎಲ್ಲ ವಾಹನ ಹೊಸ ಸೇತುವೆಯಲ್ಲಿ ಸಂಚಾರ ಮಾಡುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಗಳು ಕಂಡು ಬಂದಿವೆ. ಜನರು ಈ ಸೇತುವೆಯ ಬಗ್ಗೆ ಭಾರೀ ಆತುರದಲ್ಲಿದ್ದಾರೆ.

Advertisement

ರಸ್ತೆ ಡಿವೈಡರ್‌ಗಳಲ್ಲಿ ಹೊಸ ಮಾದರಿಯ ದಾರಿದೀಪಗಳ ಕಂಬಗಳು ರಾರಾಜಿಸುತ್ತಿದೆ.ಅದಕ್ಕೆ ದೀಪಗಳನ್ನು ಅಳವಡಿಸಿ, ಬೆಳಕು ಬಂದಾಗ ಇಡೀ ವಿಮಾನ ನಿಲ್ದಾಣ ರಸ್ತೆಯೇ ಕಂಗೊಳಿಸಲಿದೆ. ಆದಷ್ಟು ಬೇಗ ಕಾಮಗಾರಿ ಮುಗಿದು ವಾಹನಗಳ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಆನುಕೂಲಕರ ಸೌಕರ್ಯ ಸಿಗಲಿ ಎಂಬುದು ಎಲ್ಲರ ಆಶಯ.

ಮರವೂರು ರೈಲ್ವೆ ಸೇತುವೆ ಬಳಿ ರಸ್ತೆ ವಿಸ್ತರಣೆ ಯಾವಾಗ?
ಮರಕಡದ ಸಮೀಪದ ಮಂಗಳೂರು ಮಹಾನಗರ ಪಾಲಿಕೆ ದ್ವಾರದಿಂದ ಕೆಂಜಾರಿನ ವಿಮಾನ ನಿಲ್ದಾಣದ ಆಗಮನ ದ್ವಾರದವರೆಗೆ ರಸ್ತೆ ವಿಸ್ತರಣೆ ಹಾಗೂ ದ್ವಿಪಥ ವಾಹನ ಸಂಚಾರವಾಗುತ್ತಿದೆ. ಆದರೆ ಮರವೂರು ರೈಲ್ವೆ ಸೇತುವೆ ಬಳಿ ಮಾತ್ರ ರಸ್ತೆ ಕಿರಿದಾಗಿದ್ದು, ಇಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಇಲ್ಲಿ ಯಾವಾಗಲೂ ಟ್ರಾಫಿಕ್‌ ಜಮ್‌ಗೆ ಕಾರಣವಾಗುತ್ತಿದ್ದು, ದ್ವಿಪಥ ರಸ್ತೆ ನಿರ್ಮಾಣ ಯಾವಾಗ ಎಂಬುದು ಸದ್ಯ ಸಾರ್ವಜನಿಕರಲ್ಲಿರುವ ಪ್ರಶ್ನೆ. ರೈಲ್ವೆ ಇಲಾಖೆ ಇದಕ್ಕೆ ಯಾವ ರೀತಿಯ ಸ್ಪಂದನೆ ನೀಡಲಿದೆ ಎಂದು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next