Advertisement

HMP ವೈರಸ್:‌ ಜನರು ಭಯಪಡುವ ಅಗತ್ಯವಿಲ್ಲ-ಮಾಸ್ಕ್‌ ಬಗ್ಗೆ ಸಚಿವ ಗುಂಡೂರಾವ್‌ ಹೇಳಿದ್ದೇನು?

02:52 PM Jan 06, 2025 | Team Udayavani |

ಬೆಂಗಳೂರು: ಚೀನದಾದ್ಯಂತ ಭಯ-ಭೀತಿ ಹುಟ್ಟಿಸಿರುವ ಎಚ್‌ ಎಂಪಿವಿ ( ಹ್ಯೂಮನ್‌ ಮೆಟಾನ್ಯುಮೊವೈರಸ್)‌ ಸೋಂಕು ಭಾರತದಲ್ಲಿಯೂ ಕಳವಳಕ್ಕೆ ಎಡೆಮಾಡಿಕೊಟ್ಟಿದೆ. ಸೋಮವಾರ (ಜ.06) ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಈ ಸೋಂಕು ಪತ್ತೆಯಾಗಿತ್ತು. ಆದರೆ ಈ ಬಗ್ಗೆ ಭಾರತದಲ್ಲಿ ಜನರು ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Advertisement

ಗುಂಡೂರಾವ್‌ ಪತ್ರಿಕಾಗೋಷ್ಠಿ:

ಆರೋಗ್ಯಸೌಧದಲ್ಲಿ ಸೋಮವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌, ಭಾರತದಲ್ಲಿ ಎಚ್‌ ಎಂಪಿವಿ ವೈರಸ್‌ ಹೊಸದೇನಲ್ಲ. ದೇಶದಲ್ಲಿ ಎಚ್‌ ಎಂಪಿವಿ ರೀತಿ ನೂರಾರು ವೈರಸ್‌ ಗಳಿವೆ. ಈ ಎಚ್‌ ಎಂಪಿವಿ ವೈರಸ್‌ ನಿಂದ ಜೀವಕ್ಕೆ ಅಪಾಯವಿಲ್ಲ. ಹೀಗಾಗಿ ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದರು.

2001ರಲ್ಲಿ ಪ್ರಥಮ ಬಾರಿಗೆ ಚೀನಾದಲ್ಲಿ ಈ ವೈರಸ್‌ ಅನ್ನು ಪತ್ತೆಹಚ್ಚಲಾಗಿತ್ತು. ಆದರೆ ಭಾರತದಲ್ಲಿ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಮಾಸ್ಕ್‌, ಲಾಕ್‌ ಡೌನ್‌ ನಂತಹ ಕಠಿನ ಕ್ರಮ ಜಾರಿ ಮಾಡಲ್ಲ ಎಂದು ಸಚಿವ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.

Advertisement

ಪುದುಚೇರಿ, ಗುಜರಾತ್‌ ನಲ್ಲೂ ಎಚ್‌ ಎಂಪಿವಿ ಪ್ರಕರಣ ಪತ್ತೆಯಾಗಿದೆ. ಚೀನಾದಲ್ಲಿನ ಎಚ್‌ ಎಂಪಿವಿ ಸೋಂಕಿನ ಸ್ಥಿತಿಗತಿ ಕುರಿತು ಕೇಂದ್ರ ಸರ್ಕಾರ ಮಾಹಿತಿ ಕೊಡಬೇಕು. ಕೇಂದ್ರ ಸರ್ಕಾರ, ಐಸಿಎಂಆರ್‌ ನಿರಂತರ ಸಂಪರ್ಕದಲ್ಲಿದೆ. ಅಷ್ಟೇ ಅಲ್ಲ ರಾಜ್ಯದಲ್ಲಿ ಈ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಏನು ಮಾಡಬೇಕು?

*ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಿ.

*ಕೈಗಳನ್ನು ಸಾಬೂನು, ಸ್ಯಾನಿಟೈಜರ್‌ ನಿಂದ ತೊಳೆದುಕೊಳ್ಳಿ.

*ಸಾಕಷ್ಟು ನೀರು ಕುಡಿಯಬೇಕು, ಪೌಷ್ಟಿಕ ಆಹಾರವನ್ನು ಸೇವಿಸಬೇಕು.

*ಜ್ವರ, ಕೆಮ್ಮು ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಬೇಕು.

ಏನು ಮಾಡಬಾರದು?

*ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ, ಟವೆಲ್‌, ಟಿಶ್ಯೂ ಪೇಪರ್‌ ಹಂಚಿಕೊಳ್ಳಬೇಡಿ.

*ಕಣ್ಣು, ಮೂಗು, ಬಾಯಿಯನ್ನು ಪದೇ, ಪದೇ ಸ್ಪರ್ಶಿಸಬೇಡಿ.

*ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.

Advertisement

Udayavani is now on Telegram. Click here to join our channel and stay updated with the latest news.

Next