Advertisement

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

11:02 PM Jan 01, 2025 | Team Udayavani |

ತುಮಕೂರು: ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮತ್ತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ನಕಲಿ ಲೆಟರ್‌ ಹೆಡ್‌ ಹಾಗೂ ನಕಲಿ ಸಹಿ ಹಾಕಿ ವಂಚನೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ಸಚಿವ ವಿ.ಸೋಮಣ್ಣ ಅವರ ಆಪ್ತ ಸಹಾಯಕ ಮಹೇಶ್‌ ನೀಡಿರುವ ದೂರಿನ ಮೇಲೆ ನಗರದ ಹೊಸ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿ ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಗೋವರ್ಧನ್‌ನನ್ನು ಬಂಧಿಸಲಾಗಿದೆ.

ಈ ಹಿಂದೆ ಗೃಹ ಸಚಿವರ ಹೆಸರಲ್ಲಿ ವಂಚನೆ ಮಾಡಿದ್ದ ಬಳಿಕ ಈಗ ವಿ.ಸೋಮಣ್ಣ ಹಾಗೂ ಶಾಲಿನಿ ರಜನೀಶ್‌ ಹೆಸರಲ್ಲಿ ಸಹಿ ಮತ್ತು ಲೆಟರ್‌ ಹೆಡ್‌ ನಕಲು ಮಾಡಿದ್ದಾನೆ. ಸಚಿವರು, ಹಿರಿಯ ಅಧಿಕಾರಿಗಳ ಹೆಸರಲ್ಲಿಯೂ ಹಲವರಿಗೆ ವಂಚನೆ ಮಾಡಿದ್ದಾನೆಂಬುದು ಪರಿಶೀಲನೆ ವೇಳೆ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next