Advertisement

ಮುಖ್ಯ ರಸ್ತೆಯಲ್ಲಿದ್ದ ವಿದ್ಯುತ್‌ ಕಂಬ ಸ್ಥಳಾಂತರ 

06:05 AM Jul 27, 2018 | Team Udayavani |

ಶಿರ್ವ: ಕಟಪಾಡಿ-ಶಿರ್ವ- ಬೆಳ್ಮಣ್‌ ಮುಖ್ಯ ರಸ್ತೆಯ ಪಂಜಿಮಾರು ಪಲ್ಕೆ ಬಳಿ ರಸ್ತೆಯಲ್ಲಿಯೇ ಉಳಿದು ಕೊಂಡಿದ್ದ  ವಿದ್ಯುತ್‌ ಕಂಬವನ್ನು ಗುರುವಾರ ಸ್ಥಳಾಂತರಗೊಳಿಸಲಾಗಿದೆ. ರಸ್ತೆ ಕಾಮಗಾರಿಯ ಡಾಮರು ಕಾಮಗಾರಿ ಮುಗಿದು ಏಳೆಂಟು ತಿಂಗಳು ಕಳೆದರೂ ಲೋಕೋಪಯೋಗಿ ಇಲಾಖೆ ಮತ್ತು ಮೆಸ್ಕಾಂನ ನಿರ್ಲಕ್ಷéದಿಂದಾಗಿ ಕಂಬಗಳನ್ನು ತೆರವುಗೊಳಿಸಿರಲಿಲ್ಲ. ಕಂಬ ರಸ್ತೆಯಲ್ಲಿದ್ದರೂ ತೆರವುಗೊಳಿಸದೆ ಗುತ್ತಿಗೆದಾರರು ಡಾಮರೀಕರಣ ನಡೆಸಿದ್ದರು.

Advertisement

ಉದಯವಾಣಿ ವರದಿಗೆ ಸ್ಪಂದನೆ
ವಿದ್ಯುತ್‌ ಕಂಬ ರಸ್ತೆ ಯಲ್ಲಿದ್ದು ಯಾವುದೇ ಅಪಾಯದ ಮುಂಜಾಗ್ರತಾ ಫಲಕ ಅಳವಡಿಸದೇ ಇರುವುದರ ಬಗ್ಗೆ ಪತ್ರಿಕೆ ಹಲವು ಬಾರಿ ಎಚ್ಚರಿಸಿತ್ತು. ಜು.13ರಂದು ಕಂಬವೇ ನನ್ನಿಂದ ನಿಮಗೆ ಅಪಾಯವಿದೆ, ದಯಮಾಡಿ ನನ್ನನ್ನು ರಸ್ತೆಯ ಬದಿಗೆ ನಿಲ್ಲಿಸಿ ಎಂಬ ಬರಹದ ಬೋರ್ಡ್‌ ಅಳವಡಿಸಿ ಸ್ಥಳೀಯ ನಾಗರಿಕರು ಲೋಕೋಪಯೋಗಿ ಇಲಾಖೆ ಮತ್ತು ಮೆಸ್ಕಾಂ ಅಧಿಕಾರಿಗಳನ್ನು ಎಚ್ಚರಿ ಸುವ ಪ್ರಯತ್ನ ನಡೆಸಿರುವುದರ ಬಗ್ಗೆ ಉದಯವಾಣಿ ಸಮಗ್ರ ವರದಿ ನೀಡಿತ್ತು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.ಇದೀಗ ಕಾಪು ಮೆಸ್ಕಾಂನ ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌  ಜೆ.ಪಿ. ರಾಮ, ಶಿರ್ವ ಮೆಸ್ಕಾಂನ ಶಾಖಾಧಿಕಾರಿ ಮಲ್ಲಿಕಾರ್ಜುನ್‌ ಮತ್ತು ಶಿರ್ವ ಗ್ರಾ.ಪಂ.ಸದಸ್ಯ ಕೆ.ಆರ್‌. ಪಾಟ್ಕರ್‌ ವಿದ್ಯುತ್‌ ಕಂಬಸ್ಥಳಾಂತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next