Advertisement
ನೀರುಮಾರ್ಗ, ಮೇರ್ಲಪದವು, ಅಡ್ಯಾರ್ಪದವು ಬೊಂಡಂತಿಲ, ತಿರುವೈಲು ಗ್ರಾಮದ ಸಾವಿರಾರು ಜನರಿಗೆ ಹಾಗೂ ಶಾಲಾ ವಾಹನಗಳಿಗೆ ವಾಮಂಜೂರು ತಲುಪಲು ಇರುವ ಅತೀ ಹತ್ತರದ ರಸ್ತೆ ಇದಾಗಿದೆ. ನಿತ್ಯ ಸಾವಿರಾರು ಮಂದಿ ಈ ರಸ್ತೆಯನ್ನು ಬಳಸುತ್ತಿದ್ದಾರೆ. ಸುಮಾರು 2 ಕಿ.ಮೀ. ನಷ್ಟು ಇರುವ ರಸ್ತೆ ಹೊಂಡ ಗುಂಡಿಗಳಿಂದ ತುಂಬಿಕೊಂಡಿದೆ.
ಕಳೆದ ಸರಿಸುಮಾರು 10 ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಗೊಂಡಿಲ್ಲ. ಈ ಕಾರಣದಿಂದಾಗಿ ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳಿಂದ ಕೂಡಿದೆ. ಕೆಲವು ವರ್ಷದ ಹಿಂದೆ ಅಳವಡಿಸಿದ್ದ ಕಾಂಕ್ರೀಟ್ ಸಮರ್ಪಕವಾಗಿ ಕಾಮಗಾರಿ ನಡೆಸದ ಕಾರಣ ತೆರವುಗೊಳಿಸಲಾಗಿದೆ. ಆ ಪ್ರದೇಶದಲ್ಲಿ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಹರಡಿಕೊಂಡಿದ್ದು, ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲಾ ವಾಹನಗಳ ಓಡಾಟ; ಅಪಾಯಕ್ಕೆ ಆಹ್ವಾನ
ಈ ಮಾರ್ಗದಲ್ಲಿ ಸ್ಥಳೀಯ ಖಾಸಗಿ ಶಾಲೆಗಳು ಹಾಗೂ ಇತರ ಶಾಲೆಗಳ ಹತ್ತಾರು ಶಾಲಾ ಬಸ್ಗಳು ನಿತ್ಯ ಓಡಾಡುತ್ತವೆ. ಮಕ್ಕಳನ್ನು ತುಂಬಿಸಿಕೊಂಡು ರಿಕ್ಷಾಗಳು, ಕಾರು, ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಲಾರಿ, ಗೂಡ್ಸ್ ವಾಹನಗಳು ಕೂಡ ಈ ರಸ್ತೆಯನ್ನು ಬಳಸುತ್ತಿವೆ. ಏರಿಳಿತ ಇರುವ ರಸ್ತೆಯಲ್ಲಿ ಏಕಮುಖ ಸಂಚಾರವೇ ಕಷ್ಟವಾಗುತ್ತಿದ್ದು, ಇಲ್ಲಿ ವಾಹನಗಳು ಎದುರುಬದುರಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
Related Articles
ಕಳೆದ ವರ್ಷ ಗ್ರಾಮ ಪಂಚಾಯತ್ ಮೀಟಿಂಗ್ನಲ್ಲಿ ಈ ವಿಚಾರ ಪ್ರಸ್ತಾವಿಸಿ ದುರಸ್ತಿಗೆ ಮನವಿ ನೀಡಲಾಗಿತ್ತು. ಆ ಸಂದರ್ಭ ರಸ್ತೆಗೆ ಬೇಕಾದಷ್ಟು ಅನುದಾನ ಗ್ರಾ.ಪಂ. ಬಳಿ ಇಲ್ಲ ಎಂದು ಉತ್ತರಿಸಿದ್ದರು. ಈ ವರ್ಷವೂ ಅರ್ಜಿ ನೀಡಲಾಗಿದ್ದು, ಮತ್ತೆ ಹಳೆಯ ರಾಗವನ್ನೇ ಹೇಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
Advertisement
ಅನುದಾನದ ಕೊರತೆ ಇದೆಗ್ರಾಮ ಪಂಚಾಯತ್ನಲ್ಲಿ ಈ ಕಾಮಗಾರಿ ನಡೆಸಲು ಅನುದಾನದ ಕೊರತೆ ಇದೆ. ದೊಡ್ಡ ಮೊತ್ತದ ಅನುದಾನ ಬೇಕಾಗುತ್ತದೆ. ಶಾಸಕರ ನಿಧಿಯಿಂದ ಅನುದಾನ ಒದಗಿಸಲು ಮನವಿ ಸಲ್ಲಿಸಲಾಗಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದು ಅವುಗಳನ್ನು ಬಗೆಹರಿಸಬಹುದು.
-ಶ್ರೀಧರ್, ನೀರುಮಾರ್ಗ ಗ್ರಾ.ಪಂ. ಅಧ್ಯಕ್ಷರು