Advertisement
ಸುದಿನ ವರದಿಈ ನೀರಿನ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಹಲವಾರು ವರ್ಷಗಳಿಂದ ಬಿರುಕು ಬಿಟ್ಟಿದ್ದ ಈ ಟ್ಯಾಂಕ್ ಬಗ್ಗೆ ಉದಯವಾಣಿ ಸುದಿನ ಹಲವು ಬಾರಿ ಸಚಿತ್ರ ವರದಿ ಪ್ರಕಟಿಸಿತ್ತು. ಈ ಬಗ್ಗೆ ಕಾಳಜಿ ವಹಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ತುರ್ತು ಕ್ರಮ ಕೈಗೊಂಡು ಟ್ಯಾಂಕ್ ಕೆಡವಿ ಆತಂಕ ದೂರ ಮಾಡಿದ್ದಾರೆ.
ಇದೇ ಜಾಗದಲ್ಲಿ ಜಲಜೀವನ್ ಮಿಶನ್‌ನ ನೂತನ ಟ್ಯಾಂಕ್ ಶೀಘ್ರದಲ್ಲಿಯೇ ನಿರ್ಮಾಣಗೊಳ್ಳಲಿದೆ ಎಂದು ಪಿಡಿಒ ಸತೀಶ್ ತಿಳಿಸಿದ್ದಾರೆ. ಈಗಾಗಲೇ ಮುಂಡ್ಕೂರು ಗ್ರಾಮ ಪಂಚಾಯತ್‌ನಲ್ಲಿ 1,650 ಕುಟುಂಬಗಳಿದ್ದು 1,200 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಲಭ್ಯವಾಗಲಿದೆ ಎಂದೂ ಸತೀಶ್ ತಿಳಿಸಿದರು. ನಾಗರಿಕರಲ್ಲಿ ಆತಂಕ ಮೂಡಿಸಿದ್ದ ಈ ಶಿಥಿಲಗೊಂಡ ಟ್ಯಾಂಕ್‌ನ ನೆಲಸಮ ಕಾಮಗಾರಿ ಪ್ರಕ್ರಿಯೆಯ ಬಗ್ಗೆ ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಪಳಿಗ, ಪಿಡಿಒ ಸತೀಶ್ ಅವರನ್ನು ಗ್ರಾಮಸ್ಥರು ಶ್ಲಾ ಸಿದ್ದಾರೆ.