Advertisement
ಜಾರ್ಖಂಡ್ ಮೂಲದ ವಿಕಾಸ್ ಕುಮಾರ್ ಸಿಂಗ್(25) ಮತ್ತು ಶಿವಂ ಸಿಂಗ್(27) ಬಂಧಿತರು. ಅವರಿಂದ ಎರಡು ಕೋಟಿ ರೂ. ಮೌಲ್ಯದ 150 ಎಂಡಿಎಂಎ, XYC ಮಾತ್ರೆಗಳು, 400 ಗ್ರಾಂ ಚರಸ್, 180 ಎಲ್ ಎಡಿ ಮಾತ್ರೆಗಳು, 3,520 ಗ್ರಾಂ ಹ್ಯಾಶಿಷ್ ಆಯಿಲ್, 50 ಗ್ರಾಂ ಹೈಡ್ರೋ ಗಾಂಜಾ, 30 ಕೆ.ಜಿ. ಗಾಂಜಾ, 2 ಮೊಬೈಲ್ ಗಳು, ಎರಡು ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ರೋಹಿತ್, ರವಿ, ಸೈಯದ್, ಅಕ್ಷಯ್ ಕುಮಾರ್ ಎಂಬುವರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
Related Articles
ವಿಕಾಸ್ ಕುಮಾರ್, ಶಿವಂ, ರೋಹಿತ್, ರವಿ, ಸೈಯದ್ ಗೆ ಮಾಸಿಕ ಇಂತಿಷ್ಟು ಸಂಬಳ ನಿಗದಿ ಪಡಿಸಿ ವೈಟ್ ಫೀಲ್ಡ್‌ನಲ್ಲಿ ಬಾಡಿಗೆ ಮನೆ ಮಾಡಿ, ಆ ಬಾಡಿಗೆ ಮೊತ್ತವನ್ನು ಅಕ್ಷಯ್ ಕುಮಾರ್ ಪಾವತಿಸುತ್ತಿದ್ದ. ಬಳಿಕ ನಿರ್ದಿಷ್ಟ ಗ್ರಾಹಕರು ಆರೋಪಿಗಳಿಗೆ ವಾಟ್ಸ್ ಆ್ಯಪ್ ಮೂಲಕ ಸಂದೇಶ ಅಥವಾ ಕರೆ ಮಾಡಿ ಇಂತಹ ಡ್ರಗ್ಸ್ ಬೇಕೆಂದು ಮನವಿ ಮಾಡುತ್ತಿದ್ದರು. ಅದರಂತೆ ಅವರಿಗೆ ಸಣ್ಣ-ಸಣ್ಣ ಪ್ಯಾಕೆಟ್‌ಗಳ ಮೂಲಕ ಮನೆ ಬಾಗಿಲಿಗೆ ಪೂರೈಕೆ ಮಾಡುತ್ತಿದ್ದರು.
Advertisement
ಇತ್ತೀಚೆಗೆ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುವಾಗ ಮಾಲು ಸಮೇತ ಸಿಕ್ಕಿ ಬಿದ್ದಿದ್ದಾರೆ. ಬಳಿಕ ಅವರನ್ನು ಮನೆಗೆ ಕರೆದೊಯ್ದು ಪರಿಶೀಲಿಸಿದಾಗ ಸಾಕಷ್ಟು ನಾನಾ ರೀತಿಯ ಡ್ರಗ್ಸ್ ಗಳು ಪತ್ತೆಯಾಗಿವೆ.
ಇನ್ನು ತಲೆಮರೆಸಿಕೊಂಡಿರುವ ರೋಹಿತ್, ರವಿ, ಸೈಯದ್ ಮೂಲಕ ಐಟಿ-ಬಿಟಿ ಕಂಪನಿಯ ಉದ್ಯೋಗಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.