Advertisement

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

03:51 PM Jan 03, 2025 | Team Udayavani |

ಬೆಂಗಳೂರು: ಕುಡಿದ ಅಮಲಿನಲ್ಲಿದ್ದ ರಿಕ್ಷಾ ಚಾಲಕನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋರಿಕ್ಷಾದಿಂದ ಹೊರಕ್ಕೆ ಜಿಗಿದ ಘಟನೆ ಗುರುವಾರ (ಜ.02) ಬೆಂಗಳೂರಿನಲ್ಲಿ ನಡೆದಿದೆ.

Advertisement

“ನನ್ನ ಪತ್ನಿಯು ಬೆಂಗಳೂರಿನ ಹೊರಮಾವುವಿನಿಂದ ಥಣಿಸಂದ್ರಕ್ಕೆ ಹೋಗಲು ‘ಖಾಸಗಿ App ಮೂಲಕ ಆಟೋವನ್ನು ಬುಕ್‌ ಮಾಡಿದ್ದರು. ಆದರೆ ಆಟೋ ಚಾಲಕ ಮದ್ಯ ಸೇವಿಸಿದ್ದು, ಹೆಬ್ಬಾಳದ ಬಳಿ ಬೇರೊಂದು ದಾರಿಯಲ್ಲಿ ಚಲಿಸಿದ್ದ.ಈ ಸಂದರ್ಭದಲ್ಲಿ ಆಟೋವನ್ನು ನಿಲ್ಲಿಸುವಂತೆ ಪದೇ ಪದೇ ಕೇಳಿಕೊಂಡರು ಆತ ನಿಲ್ಲಿಸದೇ ಇದ್ದಾಗ ಬೇರೆ ದಾರಿ ಕಾಣದೆ ಆಕೆ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿಯಬೇಕಾಯಿತು.” ಎಂದು ಆಕೆಯ ಪತಿಯು ಶುಕ್ರವಾರ (ಜ.09) ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ಧಾರೆ.

ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಈ Appನಲ್ಲಿ ಯಾವುದೇ ಕಸ್ಟಮರ್‌ ಕೇರ್‌ ನಂಬರ್‌ ಕೂಡ ಇಲ್ಲ ಎಂದು ದೂರಿದ್ದಾರೆ.

“ಇದರ ದೊಡ್ಡ ಕೊರತೆಯೆಂದರೆ ಇಲ್ಲಿ ಗ್ರಾಹಕರಿಗೆ ಬೆಂಬಲವಿಲ್ಲ. “24 ಗಂಟೆ ಕಾಯಿರಿ” ಎಂದು ನಮಗೆ ಸಂದೇಶ ಬರುತ್ತದೆ. ತುರ್ತು ಪರಿಸ್ಥಿತಿಯಲ್ಲಿ 24 ಗಂಟೆಗಳ ಕಾಲ ಕಾಯಲು ಹೇಗೆ ಸಾಧ್ಯ? ಇದರಿಂದ ಮಹಿಳೆಯ ಸುರಕ್ಷತೆ ಹೇಗೆ ಸಾಧ್ಯ?” ಎಂದು ಪತಿ ಬೆಂಗಳೂರು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದು, ಬೆಂಗಳೂರಿನ ಪೊಲೀಸರು ಈ ದೂರಿಗೆ ತಕ್ಷಣ ಸ್ಪಂದಿಸಿ ತನಿಖೆ ಆರಂಭಿಸಿದ್ದಾರೆ.

Advertisement

ಸದ್ಯ ಈ ದೂರಿಗೆ ಪ್ರತಿಕ್ರಿಯಿಸಿದ ಖಾಸಗಿ ಸಂಸ್ಥೆ, “ಹಾಯ್ ಅಜರ್, ನಿಮ್ಮ ಪತ್ನಿಗೆ ಉಂಟಾದ ಅನಾನುಕೂಲತೆಯ ಬಗ್ಗೆ ನಾವು ವಿಷಾದಿಸುತ್ತೇವೆ ಮತ್ತು ಅವರು ಈಗ ಚೆನ್ನಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಮಗೆ ಘಟನೆಯ ವಿವರಗಳ ಕುರಿತಾಗಿ ನೇರ ಸಂದೇಶವನ್ನು ಕಳುಹಿಸಿ. ನಾವು ಇದನ್ನು ತ್ವರಿತವಾಗಿ ಪರಿಶೀಲಿಸುತ್ತೇವೆ” ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next