ಬೆಂಗಳೂರು: ರೂಮ್ ಕೀ ಕೊಡದೆ ಸತಾಯಿಸುತ್ತಿದ್ದ ಕಾರಣಕ್ಕೆ ವಾಟರ್ ಹೀಟರ್ ಕಾಯಿಲ್‌ನಿಂದ ರೂಮ್‌ಮೇಟ್‌ಗೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟಿ.ನರಸೀಪುರ ಮೂಲದ ನಾಗರಾಜ್ (36) ಬಂಧಿತ ಆರೋಪಿ.
ಈತನ ರೂಮ್ ಮೆಟ್ ಆಗಿದ್ದ ಶ್ರೀನಿವಾಸ್ (45) ಕೊಲೆಯಾದವ.
ಇಬ್ಬರೂ ಟಿ.ನರಸೀಪುರ ಮೂಲದವರಾಗಿದ್ದು, ಗಾರೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಶ್ರೀನಿವಾಸನಗರದಲ್ಲಿ ರೂಮ್ ಬಾಡಿಗೆಗೆ ಪಡೆದು ಇಬ್ಬರೂ ಅಲ್ಲಿ ವಾಸವಿದ್ದರು. ಶ್ರೀನಿವಾಸ್ ಮದುವೆಯಾಗಿ ಪತ್ನಿಯನ್ನು ತೊರೆದಿದ್ದ. ಈ ನಡುವೆ ರೂಮ್‌ನಲ್ಲಿ ಶ್ರೀನಿವಾಸ್ ಸದಾ ಆರೋಪಿ ನಾಗರಾಜ್ ಮೊಬೈಲ್ ತೆಗೆದುಕೊಂಡು ಕಾಲಕಳೆಯುತ್ತಿದ್ದ. ಜೊತೆಗೆ ರೂಮ್‌ನ ಕೀ ಕೊಡದೆ ಸತಾಯಿಸುತ್ತಿದ್ದ. ಈ ವಿಚಾರಕ್ಕೆ ಡಿ.26ಕ್ಕೆ ರೂಮ್‌ನಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರುತ್ತಿದ್ದಂತೆ ಆಕ್ರೋಶಗೊಂಡ ನಾಗರಾಜ್ ವಾಟರ್ ಹೀಟರ್ ಕಾಯಿಲ್‌ನಿಂದ ಶ್ರೀನಿವಾಸ್‌ಗೆ ಹಲ್ಲೆ ನಡೆಸಿದ್ದ. ಗಾಯಗೊಂಡು ನೋವಿನಿಂದ ಶ್ರೀನಿವಾಸ್ ರಾತ್ರಿ ರೂಮ್‌ನಲ್ಲಿ ಮಲಗಿದ್ದಾಗ ಮೃತಪಟ್ಟಿದ್ದಾನೆ.
ಮರುದಿನ ನಾಗರಾಜ್ ಎದ್ದು ನೋಡಿದಾಗ ಆತ ಮೃತಪಟ್ಟಿರುವುದು ಕಂಡು ಬಂದಿತ್ತು.