Advertisement
ಕ್ರೈಂ ಬ್ರಾಂಚ್ 4,590 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು 29 ಆರೋಪಿಗಳನ್ನು ಹೆಸರಿಸಿದೆ, ಇದರಲ್ಲಿ 26 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ನ ಸಹೋದರ ಅನ್ಮೋಲ್ ಬಿಷ್ಣೋಯ್ ಸೇರಿದಂತೆ ಮೂವರು ವಾಂಟೆಡ್ ಗಳು ಪ್ರಕರಣದಲ್ಲಿ ಸೇರಿದ್ದಾರೆ. ಇನ್ನೂ ಇಬ್ಬರು ಶಂಕಿತ ಸಹ-ಸಂಚುಕೋರರು, ಮೊಹಮ್ಮದ್ ಯಾಸಿನ್ ಅಖ್ತರ್ ಮತ್ತು ಶುಭಂ ಲೋಂಕರ್.ಎಲ್ಲಾ 29 ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ 26 ಆರೋಪಿಗಳಲ್ಲಿ ಪ್ರಮುಖ ಶೂಟರ್ ಶಿವಕುಮಾರ್ ಗೌತಮ್ ಮತ್ತು ಆತನ ಸಹಾಯಕರು ಸೇರಿದ್ದಾರೆ.