Advertisement

ಮೆಚ್ಚುಗೆ ಪಡೆಯಿತು ‘ಧರಣಿ ಮಂಡಲ ಮಧ್ಯದೊಳಗೆ…’ ಟ್ರೇಲರ್

04:11 PM Nov 30, 2022 | Team Udayavani |

ಈಗಾಗಲೇ ತನ್ನ ಟೈಟಲ್‌, ಟೀಸರ್‌ ಮತ್ತು ಹಾಡುಗಳ ಮೂಲಕ ಸಿನಿಮಂದಿಯ ಗಮನ ಸೆಳೆಯುತ್ತಿರುವ “ಧರಣಿ ಮಂಡಲ ಮಧ್ಯದೊಳಗೆ…’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.

Advertisement

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಡಿಜಿಟಲ್‌ ಫ್ಲಾಟ್‌ಫಾರ್ಮ್ ಮೂಲಕ ಬಿಡುಗಡೆ ಟ್ರೇಲರ್‌ ಬಿಡುಗಡೆ ಮಾಡಿದರೆ, ಮತ್ತೂಬ್ಬ ನಟ ವಸಿಷ್ಟ ಸಿಂಹ ವೇದಿಕೆಯಲ್ಲಿ ಹಾಜರಿದ್ದು ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

‘ಗುಲ್ಟಾ’ ಖ್ಯಾತಿಯ ನಟ ನವೀನ್‌ ಶಂಕರ್‌, ಐಶಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ “ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದಲ್ಲಿ ಯಶ್‌ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್‌ ತುಮ್ಮಿನಾಡು, ಓಂಕಾರ್‌, ನಿತೇಶ್‌ ಮಹಾನ್‌, ಜಯಶ್ರೀ ಆರಾಧ್ಯ, ಶಾಂಭವಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಶ್ರೀಧರ್‌ ಶಿಕಾರಿಪುರ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕ ನವೀನ್‌ ಶಂಕರ್‌, “ಗುಲ್ಟಾ’ ಸಿನಿಮಾದ ನಂತರ ನಾನು ಕೇಳಿದ ತುಂಬ ಇಂಟ್ರಸ್ಟಿಂಗ್‌ ಸಬ್ಜೆಕ್ಟ್ ಸಿನಿಮಾ ಇದಾಗಿದೆ. ಇದರಲ್ಲಿ ಬಾಕ್ಸಿಂಗ್‌ನಲ್ಲಿ ಸಾಧನೆ ಮಾಡ ಬೇಕು ಎಂದುಕೊಂಡಿ ರುವ ಆದಿ ಎಂಬ ಹುಡುಗನ ಪಾತ್ರವನ್ನು ನಿರ್ವಹಿಸಿದ್ದೇನೆ’ ಎಂದರು.

ಇದನ್ನೂ ಓದಿ:ಮಫ್ಲರ್ ಯಾಕೆ ಧರಿಸಿಲ್ಲ ಎಂದ ಮಹಿಳೆಗೆ ಉತ್ತರ ಕೊಟ್ಟ ಕೇಜ್ರಿವಾಲ್; ವಿಡಿಯೋ

Advertisement

“ನಮ್ಮ ಸುತ್ತಮುತ್ತ ಇರುವವರ ಕಥೆಯೇ “ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ. ಹೈಪರ್‌ ಲಿಂಕ್‌ ಶೈಲಿಯ ಕ್ರೈಂ ಡ್ರಾಮಾ ಕಥಾಹಂದರದ ಸಿನಿಮಾವಿದು. ಬಾಕ್ಸಿಂಗ್‌ನಲ್ಲಿ ಅಪಾರ ಆಸಕ್ತಿ ಇರುವ ಹುಡುಗನ ಬದುಕಿನಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆಯಲಾದ ಕಥೆ ಚಿತ್ರದಲ್ಲಿದೆ. ಪ್ರೀತಿ, ಸೆಂಟಿಮೆಂಟ್‌ ಎಳೆಯನ್ನೂ ಹೊತ್ತ ಈ ಚಿತ್ರ ಖಂಡಿತ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ’ ಎಂದು ಕಥಾಹಂದರ ವಿವರಣೆ ನೀಡಿದರು ನಿರ್ದೇಶಕ ಶ್ರೀಧರ್‌ ಶಿಕಾರಿಪುರ.

“ನಿರ್ದೇಶಕರು ಕ್ರೈಂ ಡ್ರಾಮಾ ಸಿನಿಮಾ ಎಂದಾಗ ನಾನು ಸ್ವಲ್ಪ ಯೋಚನೆ ಮಾಡ್ದೆ, ಆದ್ರೆ ಕಥೆ ಕೇಳಿ ತುಂಬಾ ಖುಷಿ ಆಯ್ತು. ಇಲ್ಲಿವರೆಗೂ ನಾನು ಮಾಡಿರುವ ಪಾತ್ರಕ್ಕಿಂತ ಕಂಪ್ಲೀಟ್‌ ಡಿಫ್ರೆಂಟ್‌ ಆಗಿರುವ ಪಾತ್ರ ನಿರ್ವಹಿಸಿದ್ದೇನೆ. ಶ್ರೇಯ ಎನ್ನುವ ಪಾತ್ರವನ್ನು ನಿರ್ವಹಿಸಿದ್ದೇನೆ. ಡೋಂಟ್‌ ಕೇರ್‌ ಆಟಿಟ್ಯೂಡ್‌ ಇರುವ ಬೋಲ್ಡ್ ಹುಡುಗಿ ಪಾತ್ರ. ಈ ಚಿತ್ರದ ಭಾಗವಾಗಿರೋದಕ್ಕೆ ತುಂಬಾ ಖುಷಿ ಇದೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ’ ಎಂಬುದು ನಾಯಕಿ ಐಶಾನಿ ಶೆಟ್ಟಿ ಮಾತು.

ನಿರ್ಮಾಪಕ ಮತ್ತು ನಟ ಓಂಕಾರ್‌, ಸಹ ನಿರ್ಮಾಪಕ ಗೌತಮಿ ರೆಡ್ಡಿ, ವೀರೇಂದ್ರ ಕಂಚನ್‌, ಸಂಗೀತ ನಿರ್ದೇಶಕ ರೋಣದ ಬಕ್ಕೇಶ್‌, ಕಾರ್ತಿಕ್‌ ಚೆನ್ನೋಜಿರಾವ್‌ ನಟರಾದ ಯಶ್‌ ಶೆಟ್ಟಿ, ಸಿದ್ಧು ಮೂಲಿಮನಿ, ಐರಾ ಮೊದಲಾದವರು ಸಿನಿಮಾದ ಬಗ್ಗೆ ಮಾತನಾಡಿದರು

Advertisement

Udayavani is now on Telegram. Click here to join our channel and stay updated with the latest news.

Next