ಶಬರಿಮಲೆ: ಶಬರಿಮಲೆ ಸನ್ನಿಧಿಯಲ್ಲಿ ಡಿ. 26ರಂದು ಮಂಡಲ ಪೂಜೆ ಜರಗಲಿದೆ. ಅಂದು ಮಧ್ಯಾಹ್ನ 12ರಿಂದ 12.30ರ ನಡುವಣ ಮುಹೂರ್ತದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಚಿನ್ನದೊಡವೆ ತೊಡಿಸಿ ಮಂಡಲ ಪೂಜೆ ನಡೆಯಲಿರುವುದು.
ತಂತ್ರಿಗಳಾದ ಕಂಠರ ಬ್ರಹ್ಮದತ್ತನ್ ಅವರು ಮುಖ್ಯ ಕಾರ್ಮಿಕತ್ವ ವಹಿಸುವರು. ಮುಖ್ಯ ಅರ್ಚಕ ಎಸ್. ಅರುಣ್ ಕುಮಾರ್ ನಂಬೂದಿರಿ ಸಹ ಕಾರ್ಮಿಕತ್ವ ವಹಿಸುವರು. ಅಂದು ಮುಂಜಾನೆ 3.30ರಿಂದ 11ರ ವರೆಗೆ ಮಾತ್ರವೇ ತುಪ್ಪಾಭಿಷೇಕ ನಡೆಯಲಿದೆ. ಅಂದು ರಾತ್ರಿ ಬಾಗಿಲು ಮುಚ್ಚಿದ ಅನಂತರ ಮಕರ ಜ್ಯೋತಿ ತೀರ್ಥಾಟನೆಗಾಗಿ ಡಿ. 30ರಂದು ಸಂಜೆ 5ಕ್ಕೆ ತೆರೆಯಲಾಗುವುದು.
ಕಾಡುದಾರಿ ಮೂಲಕ ತಲುಪುವ ಭಕ್ತರಿಗೆ ಪ್ರತ್ಯೇಕ ಪರಿಗಣನೆ ಪರಂಪರಾಗತ ಕಾನನ ದಾರಿ ಮೂಲಕ ಸನ್ನಿಧಾನಕ್ಕೆ ತಲುಪುವ ತೀರ್ಥಾಟಕರಿಗೆ ಹೆಚ್ಚು ಹೊತ್ತು ಸರದಿಯಲ್ಲಿ ನಿಲ್ಲದೆ ಸುಗಮವಾಗಿ ದೇವರ ದರ್ಶನ ನಡೆಸಲು ಅವಕಾಶ ಲಭಿಸಲಿದೆ. ಕಾಲುದಾರಿ ಮೂಲಕ ತಲುಪುವ ತೀರ್ಥಾಟಕರಿಗೆ ಅರಣ್ಯ ಇಲಾಖೆ ಪ್ರತ್ಯೇಕ ಪಾಸ್ ನೀಡಲಿದೆ. ಅವರಿಗೆ ಪಂಪಾದಿಂದ ಸ್ವಾಮಿ ಅಯ್ಯಪ್ಪನ್ ರಸ್ತೆ ಮೂಲಕ ಸನ್ನಿಧಾನಕ್ಕೆ ತೆರಳಬಹುದಾಗಿದೆ.
ನೀಲಿಮಲೆ ಮೂಲಕ ತೆರಳುವುದಾದರೂ ಅಡ್ಡಿ ಯಿಲ್ಲ. ಶರಂಕುತ್ತಿ ದಾರಿಯನ್ನು ಹೊರತುಪಡಿಸಿ ಅವರಿಗೆ ಮರಕ್ಕೂಟಂನಿಂದ ಚಂದ್ರಾನಂದನ ರಸ್ತೆ ಮೂಲಕ ಸನ್ನಿಧಾ ನಕ್ಕೆ ತೆರಳಬಹುದು. ನಡಪ್ಪಂದಲ್‌ನಲ್ಲಿ ಅವರಿಗೆ ಪ್ರತ್ಯೇಕ ಸರದಿ ಏರ್ಪಡಿಸುವುದಾಗಿ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.
ಅರಣ್ಯ ಇಲಾಖೆ ನೀಡುವ ಪಾಸ್ ತೋರಿಸಿದವರನ್ನು ಪೊಲೀಸರು ಪ್ರತ್ಯೇಕ ಸಾಲಿನಲ್ಲಿ ಕಳುಹಿಸುವರು. ಆ ಮೂಲಕ ಹದಿನೆಂಟು ಮೆಟ್ಟಿಲೇರಿ ದೇವರ ದರ್ಶನ ಪಡೆಯಬಹುದು. ಎರುಮೇಲಿಯಿಂದ ಪಂಪಾವರೆಗಿನ 30 ಕಿ.ಮೀ. ಕಾಡುದಾರಿಯಲ್ಲಿ ತೆರಳುವವರಿಗೆ ಮುಕ್ಕುಳಿಯಲ್ಲಿ ಪ್ರವೇಶ ಪಾಸ್ ಲಭಿಸುವುದು. ಅದಕ್ಕೆ ಪುದುಶೆÏàರಿಯಲ್ಲಿ ಮೊಹರು ಹಾಕಿಸಿಕೊಂಡು ಮರಕ್ಕೂಟಂಗೆ ತಲುಪಬೇಕು.