Advertisement

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

11:54 PM Dec 18, 2024 | Team Udayavani |

ಬೆಂಗಳೂರು: ಜಾಗತಿಕ ಆಧ್ಯಾತ್ಮಿಕ ಗುರು, ಆರ್ಟ್‌ ಆಫ್ ಲಿವಿಂಗ್‌ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್‌ ಗುರೂಜಿ ಡಿ. 21ರಂದು ವಿಶ್ವಸಂಸ್ಥೆಯಲ್ಲಿ ವಿಶ್ವಧ್ಯಾನ’ ದಿನವನ್ನು ನಡೆಸಿಕೊಡಲಿದ್ದಾರೆ. ಈ ವೇಳೆ ಶ್ರೀಶ್ರೀಗಳು ಮುಖ್ಯ ಭಾಷಣ ಮಾಡಲಿದ್ದಾರೆ.

Advertisement

ಈ ನಿಟ್ಟಿನಲ್ಲಿ ನ್ಯೂಯಾರ್ಕ್‌ನ ವಿಶ್ವ ಸಂಸ್ಥೆಯ ‘ಪರ್ಮನೆಂಟ್‌ ಮಿಷನ್‌ ಆಫ್ ಇಂಡಿಯಾ’ ಮುಖ್ಯ ಕಚೇರಿ ಪ್ರಥಮ ವಿಶ್ವಧ್ಯಾನ ದಿನದ ಆಚರಣೆಗೆ ಸಿದ್ಧವಾಗುತ್ತಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿವರ್ತನಕಾರಕ ಲಾಭ ಮತ್ತು ಶಾಂತಿ, ಐಕ್ಯತೆ ಪೋಷಿಸುವ ನಿಟ್ಟಿನಲ್ಲಿ ಮುಂದಿನ ಪ್ರತಿ ವರ್ಷ ಜಾಗತಿಕ ಆಚರಣೆಗೆ ಇದು ನಾಂದಿಯಾಗಲಿದೆ.

ಗುರುದೇವ ರವಿಶಂಕರ ಗುರೂಜಿ ಅವರು ವಿಶ್ವಸಂಸ್ಥೆಯ ಹಿರಿಯ ನಾಯಕರು, ರಾಯಭಾರಿಗಳು ಜಾಗತಿಕ ಗಣ್ಯರು, ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಉದ್ದೇಶಿಸಿ ಶಾಂತಿ ಹಾಗೂ ಐಕ್ಯತೆಯ ಪೋಷಣೆಯಲ್ಲಿ ಧ್ಯಾನದ ಪಾತ್ರ ವಿವರಿಸುವರು. ವಿಶ್ವ ಧ್ಯಾನ ದಿನದ ಅಂಗವಾಗಿ ಡಿ. 21ರಂದು ಜಗತ್ತಿನಾದ್ಯಂತ //wolf.me/world&meditation&day  ನಲ್ಲಿ ನೇರ ಪ್ರಸಾರವಾಗಲಿದೆ (ಭಾರತೀಯ ಕಾಲಮಾನ ರಾತ್ರಿ 8 ಗಂಟೆ).

ವಿಶ್ವ ಧ್ಯಾನ ದಿನ ಏಕೆ ಮುಖ್ಯ?
ಆಧುನಿಕ ಜಗತ್ತಿನಲ್ಲಿ ಒತ್ತಡ, ಹಿಂಸಾಚಾರ, ವಿಶ್ವಾಸದ ಕೊರತೆ ದೊಡ್ಡ ಸವಾಲುಗಳು. ಇವುಗಳನ್ನು ಎದುರಿಸಲು ಧ್ಯಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ವಿಶ್ವ ಧ್ಯಾನದ ದಿನವನ್ನು ಸರ್ವಾನಮತದಿಂದ ಒಪ್ಪಿ ಮಹತ್ತರ ಹೆಜ್ಜೆಯಾಗಿದೆ. ಜಾಗತಿಕ ಶಾಂತಿ ಸ್ಥಾಪನೆ ಜತೆಗೆ ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸದೃಢತೆ, ಸಾಮಾಜಿಕ ಸಾಮರಸ್ಯ ಬೆಳೆಸಲು ಇದು ಸಹಕಾರಿ. ಧ್ಯಾನದಿಂದ ಮನಸ್ಸಿನ ಶಾಂತತೆ, ಉನ್ನತ ದೃಷ್ಟಿಕೋನ ಹಾಗೂ ಸಹಾನುಭೂತಿ ಬೆಳೆಸುತ್ತದೆ. ಸಾಮರಸ್ಯ ಬೆಸೆದು ಶಾಶ್ವತ ಶಾಂತಿ ನೆಲೆಸಲು ಪ್ರೇರಣೆಯಾಗಲಿದೆ. ರಾಷ್ಟ್ರೀಯತೆ, ಸಂಸ್ಕೃತಿ ಮತ್ತು ನಂಬಿಕೆ ಗಡಿಗಳನ್ನು ಮೀರಿ ಸಾರ್ವತ್ರಿಕ ಪರಿಹಾರ ಒದಗಿಸಲಿದೆ.

ಧ್ಯಾನದಿಂದ ಸವಾಲುಗಳಿಗೆ ಪರಿಹಾರ ವಿಶ್ವ ಸಂಸ್ಥೆಯು, ಧ್ಯಾನವನ್ನು ಗುರುತಿಸಿ ಮಹತ್ತರ ಹೆಜ್ಜೆಯಿಟ್ಟಿದೆ. ಧ್ಯಾನವು ಆತ್ಮವನ್ನು ಪೋಷಿಸಿ, ಮನಸ್ಸನ್ನು ಪ್ರಶಾಂತಗೊಳಿಸಲಿದೆ. ಆಧುನಿಕತೆಯ ಸವಾಲುಗಳಿಗೆ ಪರಿಹಾರ ನೀಡಲಿದೆ.
-ಶ್ರೀ ರವಿಶಂಕರ್‌ ಗುರೂಜಿ,
ಆರ್ಟ್‌ ಆಫ್ ಲಿವಿಂಗ್‌ ಸಂಸ್ಥಾಪಕ

Advertisement
Advertisement

Udayavani is now on Telegram. Click here to join our channel and stay updated with the latest news.

Next