Advertisement

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

11:14 PM Dec 22, 2024 | Team Udayavani |

ಬೆಂಗಳೂರು: ಕಿಚ್ಚ ಸುದೀಪ್(Kichcha Sudeep) ಅಭಿನಯದ ಬಹು ನಿರೀಕ್ಷಿತ ಮ್ಯಾಕ್ಸ್(Max) ಚಿತ್ರದ ಟ್ರೈಲರ್ ರವಿವಾರ(ಡಿ22 )ರಾತ್ರಿ ಬಿಡುಗಡೆಯಾಗಿದೆ.

Advertisement

ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.
ಮ್ಯಾಕ್ಸ್ ಗೆ The Ruthless Hunt has begun! (ನಿರ್ದಯ ಬೇಟೆ ಪ್ರಾರಂಭವಾಗಿದೆ!)ಎಂಬ ಅಡಿ ಬರಹ ನೀಡಲಾಗಿದೆ. ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಕನ್ನಡ ಮೂಲ ಆವೃತ್ತಿಯು ಡಿಸೆಂಬರ್ 25 ರಂದು ಕರ್ನಾಟಕದಲ್ಲಿ KRG ಸ್ಟುಡಿಯೋಸ್ ಬಿಡುಗಡೆ ಮಾಡಲಿದೆ. ತಮಿಳು ಮತ್ತು ತೆಲುಗು ಆವೃತ್ತಿಗಳು ಎರಡು ದಿನಗಳ ನಂತರ ಡಿ 27 ರಂದು ಬಿಡುಗಡೆಯಾಗಲಿವೆ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಮ್ಯಾಕ್ಸ್ U/A ಸರ್ಟಿಫಿಕೇಟ್ ನೀಡಿದೆ. ಮತ್ತು 2 ಗಂಟೆ 12 ನಿಮಿಷಗಳ ಅವಧಿಯ ಚಿತ್ರದ ತಾರಾಬಳಗದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸುನೀಲ್, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಸುಕೃತಾ ವಾಗ್ಲೆ, ಸಂಯುಕ್ತ ಹೊರನಾಡ್, ಸುಧಾ ಬೆಳವಾಡಿ, ವಿಜಯ್ ಚೆಂಡೂರ್ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next