Advertisement
ಈ ಕುರಿತು ಮಾತನಾಡುವ ಸುದೀಪ್, “ಐಸಿಯು ವಾರ್ಡ್ನಲ್ಲಿದ್ದ ನನ್ನ ತಾಯಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ, ನಾನು ಯೂಸ್ಲೆಸ್ ಆಗಿಬಿಟ್ಟೆ ಎನಿಸಿತು. ನನ್ನ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಇದ್ದಾಗಲೂ ನಾನು ತಲೆಕೆಡಿಸಿಕೊಂಡಿಲ್ಲ. ಆದರೆ ಐಸಿಯುನಲ್ಲಿದ್ದಾಗ ನನ್ನ ಅಮ್ಮನ ಪ್ಯಾರಾಮೀಟರ್ ಕೆಳಗೆ ಇಳಿದ ಆ ಕ್ಷಣ ನನಗೆ ಯೂಸ್ಲೆಸ್ ಅನಿಸಿತು. ಅವರನ್ನು ಉಳಿಸಿಕೊಳ್ಳಲಾಗಲಿಲ್ಲ, ಆ ಬೇಸರ ಕಾಡುತ್ತಲೇ ಇದೆ. ನನ್ನ ಮೊದಲ ಫ್ಯಾನ್ ಅವರು, ನಾನು ಏನೇ ಮಾಡಿದರೂ ಅದನ್ನು ಇಷ್ಟಪಡುತ್ತಿದ್ದರು. ಬಿಗ್ಬಾಸ್ನಲ್ಲಿ ಕಾಸ್ಟೂಮ್ ಹಾಕಿದ ತಕ್ಷಣ ಫೋಟೋ ತೆಗೆದು ಅಮ್ಮನಿಗೆ ಕಳುಹಿಸುತ್ತಿದ್ದೆ. ನಾನು ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ರೆ, ಅವರು “ಥೂ ನಾಯಿ’ ಎಂದು ಪ್ರೀತಿಯಿಂದ ಬೈಯುತಿದ್ದರು. ಅಮ್ಮನ ಸಾವಿನ ಬಳಿಕ ನನಗೆ ಆಸಕ್ತಿಯೇ ಹೊರಟು ಹೋಯಿತು. ಆ ನಂತರದ ವಾರಗಳಲ್ಲಿ ಬಿಗ್ಬಾಸ್ನಲ್ಲಿ ನಾನು ಸಿಂಪಲ್ ಆಗಿ ಕುರ್ತಾ ಅಷ್ಟೇ ಹಾಕುತ್ತಿದ್ದೆ. ನಂತರ ಅನಿವಾರ್ಯವಾಗಿ ಬೇರೆ ಕಾಸ್ಟೂಮ್ ಹಾಕಲು ಶುರು ಮಾಡಿದೆ. ಪೈಲ್ವಾನ್ ತನಕವೂ ಅವರು ನನ್ನ ಎಲ್ಲಾ ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ನೋಡಿದ್ದರು’ ಎನ್ನುತ್ತಾ ಭಾವುಕರಾಗುತ್ತಾರೆ ಸುದೀಪ್.
Related Articles
Advertisement