Advertisement

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

02:51 PM Dec 21, 2024 | Team Udayavani |

ನವೀನ್‌ ಶಂಕರ್‌ ನಟನೆಯ “ನೋಡಿದವರು ಏನಂತಾರೆ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರ ಜನವರಿ 31ರಂದು ತೆರೆಕಾಣುತ್ತಿದೆ. ನವೀನ್‌ ಶಂಕರ್‌ ಈ ಚಿತ್ರದ ನಾಯಕ. ಈ ಸಿನಿಮಾವನ್ನು ಕುಲದೀಪ್‌ ಕಾರಿಯಪ್ಪ ಅವರು ಬರೆದು ನಿರ್ದೇಶಿಸಿದ್ದು, ನಾಗೇಶ್‌ ಗೋಪಾಲ್‌ ಅವರು ನಿರ್ಮಾಣ ಮಾಡಿದ್ದಾರೆ. ಅಪೂರ್ವ ಭಾರದ್ವಾಜ್‌ ರವರು ನಾಯಕಿ ಅಭಿನಯಿಸಿದ್ದಾರೆ.

Advertisement

ನವೀನ್‌ ಶಂಕರ್‌ ಅವರಿಗೆ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ನಿರ್ದೇಶಕರ ಹೇಳುವಂತೆ ನವೀನ್‌ ಶಂಕರ್‌ ಅವರ ಪಾತ್ರ ನಮ್ಮೆಲ್ಲರ ಒಳಗಿರುವ ಒಬ್ಬ ಮನುಷ್ಯನ ಕಥೆ ಹಾಗು ಭಾವನೆಗಳನ್ನು ಹೇಳುತ್ತದೆ. ಜೀವನದಲ್ಲಿ ನಮ್ಮ ಅಸ್ತಿತ್ವದ ಬಗ್ಗೆಯೇ ನಮಗೆ ಕಾಡುವ ಪ್ರಶ್ನೆಗಳು, ಪ್ರೀತಿ, ಆತ್ಮಾವಲೋಕನ ಹಾಗೂ ಬಾಂಧವ್ಯಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಕರ್ನಾಟಕದ ಪ್ರೇಕ್ಷಣೀಯ ಹಾಗೂ ಯಾರೂ ಕಂಡಿರದ ಸುಂದರ ತಾಣಗಳಲ್ಲಿ ನೋಡಿದವರು ಏನಂತಾರೆ ಸಿನಿಮಾ ಚಿತ್ರೀಕರಣಗೊಂಡಿದೆ.

ಆಶ್ವಿ‌ನ್‌ ಕೆನೆಡಿ ಛಾಯಾಗ್ರಾಹಕ ರಾಗಿದ್ದು, ಮಯೂರೆಶ್‌ ಅಧಿಕಾರಿ ಸಂಗೀತ ನೀಡಿದ್ದಾರೆ. ಜಯಂತ್‌ ಕಾಯ್ಕಿಣಿ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಒಂದು ಹಾಡಿಗೆ ಲೈಲಾ ಪದ ಪೋಣಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್‌ ಮತ್ತು ಕೀರ್ತನ್‌ ಹೊಳ್ಳಾ ಹಾಗೂ ಅಮೆರಿಕಾದ ಗಾಯಕ ಜೋರ್ಡನ್‌ ರಾಬರ್ಟ್‌ ಕಿರ್ಕ್‌ ಹಾಡುಗಳಿಗೆ ಧ್ವನಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next