Advertisement

Desi Swara: ಭಗವದ್ಗೀತೆ ಕಂಠಪಾಠದಲ್ಲಿ ಚಿನ್ನದ ಪದಕ

01:02 PM Jul 27, 2024 | Team Udayavani |

ಶಿಕಾಗೋ:ಅಮೆರಿಕದ ಶಿಕಾಗೋ ನಗರದಲ್ಲಿ ದತ್ತ ಪೀಠ ಮೈಸೂರು ವತಿಯಿಂದ ಜುಲೈ 18ರಿಂದ 21ರ ವರೆಗೆ ಆಯೋಜಿಸಿದ 9ನೇ ವರ್ಷದ ಗೀತಾ ಯಜ್ಞ ಭಾಗವಾಗಿ ಸಂಪೂರ್ಣ ಭಗವದ್ಗೀತೆಯನ್ನು ತಿಂಗಳಲ್ಲಿ ಕಂಠಪಾಠ ಮಾಡಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪೆರ್ಲ ಕೊಡೆಂಕಿಲ ಮೂಲದ 6 ವರ್ಷದ ಬಾಲಕಿ ಶ್ರಿಯಾ ಚಿನ್ನದ ಪದಕ ಪಡೆದಿದ್ದಾರೆ.

Advertisement

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರಮಾಣ ಪತ್ರ ಹಾಗೂ ಪದಕ ನೀಡಿದರು. ಅಮೆರಿಕ ದೇಶದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಹುಟ್ಟಿ ಬೆಳೆದ ಶ್ರಿಯಾ ರವಿಶಂಕರ ಕೊಡೆಂಕಿಲ ಮತ್ತು ಶೈಲಿ ದಂಪತಿ ಪುತ್ರಿ.

ಕೊಡೆಂಕಿಲ(ಬರೆಕರೆ) ವಾಸುದೇವ ಭಟ್‌, ಸುಗುಣ ದಂಪತಿ ಹಾಗೂ ಮಂಗಳೂರು ಅಶೋಕ ನಗರದ ಕೆ.ಚಂದ್ರಮೋಹನ್‌ ಮತ್ತು ಅರುಣ ಪ್ರಭಾ ದಂಪತಿ ಮೊಮ್ಮಗಳು.

Advertisement

Udayavani is now on Telegram. Click here to join our channel and stay updated with the latest news.

Next