Advertisement
ಕೆಲವು ರಾಷ್ಟ್ರಗಳ ಆಚರಣೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಬಹುತೇಕ ಏಕರೂಪದ ಸಂಭ್ರಮ ಕಾಣಬಹುದು. ಶಾಂತಿ ದೂತನ ಜನನದ ಹಬ್ಬದ ಸಂಭ್ರಮದಲ್ಲಿ ಜಗತ್ತು ಮಿಂದೆದ್ದಿದೆ. ವಿಶ್ವವೇ ಜಗಮಗಿಸುತ್ತಿದೆ. ಕ್ರಿಸ್ತನ ಹುಟ್ಟೂರು ಬೆತ್ಲೆಹೇಮ್ಗೆ ಪಾದಯಾತ್ರೆ ಇಸ್ರೇಲ್ನ ಬೆತ್ಲೆಹೇಮ್ನಲ್ಲಿ 2000 ವರ್ಷದ ಹಿಂದ ಯೇಸುಕ್ರಿಸ್ತರ ಜನನವಾಯಿತು ಎನ್ನುತ್ತದೆ ಪವಿತ್ರ ಬೈಬಲ್. ಕ್ರಿಸ್ತ ಜನನ ಕಾಲದಲ್ಲಿ ಇದ್ದ ಕೊರೆಯುವ ಚಳಿಯ ವಾತಾವರಣ ಇಂದಿಗೂ ಮುಂದುವರೆದಿದೆ.
Related Articles
Advertisement
ಯುರೋಪ್ ದೇಶಗಳಲ್ಲಿ 2 ತಿಂಗಳ ಕಾಲ ಸಂಭ್ರಮಯುರೋಪ್ನ ದೇಶಗಳಾದ ಯುಕೆ, ಜರ್ಮನಿಗಳಲ್ಲಿ ವಿಶಿಷ್ಟ ಆಚರಣೆ ಗಮನಿಸಬಹುದು. ನವೆಂಬರ್ ತಿಂಗಳಲ್ಲೇ ಕ್ರಿಸ್ಮಸ್ ಸಂಭ್ರಮ ಆರಂಭವಾಗುತ್ತದೆ. ಲಂಡನ್, ಇಡನ್ ಬರ್ಗ್, ಮ್ಯಾಂಚೇಸ್ಟರ್ಗಳಲ್ಲಿ ಕ್ರಿಸ್ಮಸ್ ಹಬ್ಬದ ಮಾರುಕಟ್ಟೆಗಳು ತೆರೆದುಕೊಳ್ಳುತ್ತವೆ. ಹಬ್ಬದ ದಿನಗಳಲ್ಲಿ ಸಂಭ್ರಮ ಸಡಗರ ಕಾಣಬಹುದು. ಜರ್ಮನಿಯಲ್ಲಿ ಕ್ರಿಸ್ತ ಆಗಮನದ ಕಾಲ ಆಚರಿಸುವ ಜತೆ ವಿಶೇಷವಾಗಿ ಕ್ಯಾಂಡಲ್, ರೀದ್ಗಳನ್ನು ಬಳಸಲಾಗುತ್ತದೆ. ಕ್ರಿಸ್ಮಸ್ ವಿಶೇಷ ಪ್ರಾರ್ಥನೆಯೊಂದಿಗೆ ಉಡುಗೊರೆ ನೀಡುವ ಸಂಪ್ರದಾಯವಿದೆ. ಜತೆಗೆ ಪಾಟಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ಕಾಣಬಹುದು. ಲಂಡನ್ ಬ್ರಿಡ್ಜ್ನ ಸೌತ್ವಾಕ್ ಕ್ಯಾಥೇಡ್ರಲ್, ಸಂತ ಮಾರ್ಟಿನ್, ಹೋಲಿ ಟ್ರಿನಿಟಿ, ಸಂತ ಪೌಲ್ಸ್ ಕ್ಯಾಥೇಡ್ರಲ್ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ಕ್ರಿಸ್ಮಸ್ ಜಾಗರಣೆ ಕಾಣಬಹುದು. ಇಟಲಿ, ಆಸ್ಟ್ರಿಯಾ ಸೇರಿದಂತೆ ಇತರೆ ಯುರೋಪಿಯನ್ ದೇಶಗಳಲ್ಲೂ ಕ್ರಿಸ್ತ ಜನನದ ಜಾಗರಣೆಯೊಂದಿಗೆ ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಬಳಿಕ ಹಬ್ಬದ ಸಹಭೋಜನ ಇರುತ್ತದೆ. ಕ್ರೈಸ್ತರು ಪರಸ್ಪರ ಉಡುಗೊರೆಗಳನ್ನು ಹಂಚಿಕೊಳ್ಳುತ್ತಾರೆ.
ಕರಾವಳಿ ಮೂಲದ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುವೈಟ್ನಲ್ಲೂ ಉದ್ಯೋಗದಲ್ಲಿದ್ದು, ಕ್ರಿಸ್ಮಸ್ ಸಂಭ್ರಮದ ಬಗ್ಗೆ ಮಂಗಳೂರು ಮೂಲದ ಕುವೈಟ್ ಉದ್ಯೋಗಿ ಯೌಜಾನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕುವೈಟ್ ಸಿಟಿಯಲ್ಲಿರುವ ಹೋಲಿ ಫ್ಯಾಮಿಲಿ ಕ್ಯಾಥೆಡ್ರಲ್ನಲ್ಲಿ ಕ್ರಿಸ್ಮಸ್ ಈವ್ ಸಂಭ್ರಮದಿಂದ ಆಚರಿಸಲಾಗುತ್ತದೆ. ಡಿ. 24ರಂದು ರಾತ್ರಿ ಬಲಿಪೂಜೆಗಳು ಇರುತ್ತದೆ. ಕೊಂಕಣಿ, ಮಲಯಾಳ, ತಮಿಳು, ಕನ್ನಡ, ಹಿಂದಿ ಆಂಗ್ಲ ಭಾಷೆಗಳಲ್ಲಿ ವಿವಿಧ ಸಮಯದಲ್ಲಿ ಬಲಿಪೂಜೆಗಳು ನಡೆಯತ್ತವೆ. ಸಾವಿರಾರು ಕ್ರೈಸ್ತರು ಬಲಿಪೂಜೆಗಳಲ್ಲಿ ಭಾಗಿಗಳಾಗುತ್ತಾರೆ. ಡಿ. 25ರಂದು ಕೂಡ ದಿನವಿಡೀ ಬಲಿಪೂಜೆಗಳು ನಡೆಯುತ್ತವೆ. ಕ್ರಿಸ್ಮಸ್ ಟ್ರಿ ಅಲಂಕಾರ, ಗೋದಲಿ ರಚನೆ, ಕೇಕ್ ವಿತರಣೆ ಮಾಮೂಲಿಯಾಗಿದೆ. ಉಳಿದಂತೆ ಸಾಲ್ಮಿಯಾದ ಸಂತ ತೆರೆಸಾ ಚರ್ಚ್, ಅಹಮದಿಯಾದ ಲೇಡಿ ಆಫ್ ಅರೆಬಿಯಾ, ಅಬಾಸಿಯಾದ ಡೇನಿಯಲ್ ಕಾಂಬೊನಿ ಚರ್ಚ್ಗಳಲ್ಲಿ ಕೊಂಕಣಿ ಬಲಿ ಪೂಜೆಗಳು ನಡೆಯುತ್ತವೆ.
ವಿದೇಶಿ ಉದ್ಯೋಗ ಎಂದಾಕ್ಷಣ ಎಲ್ಲರೂ ಮೊದಲು ನೆನಪಿಸುವ ಅರಬ್ ದೇಶವೇ ದುಬಾೖ. ದುಬಾೖಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರಿದ್ದಾರೆ. ಬಹು ಸಾಂಸ್ಕೃತಿಕ ಆಚರಣೆಗೆ ಅವಕಾಶವಿದ್ದು, ಅನೇಕ ವರ್ಷದಿಂದ ದುಬಾೖಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.