Advertisement

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

05:32 PM Dec 21, 2024 | |

ಅಕ್ಟೋಬರ್‌ನ ಒಂದು ದಿನ ಮನೆಯಲ್ಲಿ ಕುಳಿತು ರೇಡಿಯೋ ಕೇಳುತ್ತಾ ಇದ್ದಾಗ ಒಂದು ಸುದ್ದಿ ಶರವೇಗದಲ್ಲಿ ನನ್ನ ಕಿವಿ ತಲುಪಿತು. ಕೂಡಲೇ ನನ್ನಲ್ಲಿ ಉತ್ಸಾಹವನ್ನು ತುಂಬಿತು. ಮೊಟ್ಟ ಮೊದಲ ಬಾರಿಗೆ ನಾನು ವಾಸವಿರುವ ಊರಿನ ಹತ್ತಿರದಲ್ಲಿ ಹಾಲಿವುಡ್‌ ಸಿನೆಮಾಗಳ ಪೋಸ್ಟರ್ ಹಾಗೂ ಮೆಮೊ ರೇಬಿಲಿಯಾ ಪ್ರದರ್ಶನ ಇದೆ ಎಂದು ರೇಡಿಯೋದಲ್ಲಿ ಘೋಷಿಸಿದ್ದರು.

Advertisement

ಹಳೆಯ ಸಿನೆಮಾ ಪೋಸ್ಟರ್ ಗಳನ್ನು ಸಂಗ್ರಹ ಮಾಡುವುದು ಇಲ್ಲಿ ತುಂಬಾ ಜನರ ಹವ್ಯಾಸ. ನಾನು ಒಮ್ಮೆ ನೋಡೋಣ ಎಂದು ಸಮಯ ಮಾಡಿಕೊಂಡು ಈ ಕಾರ್ಯಕ್ರಮಕ್ಕೆ ಹೋದೆ. ನಿಜವಾಗಲೂ ಈ ದಿನ ನನ್ನ ಜೀವನದ ಅತ್ಯುನ್ನತ ಕ್ಷಣಗಳಲ್ಲಿ ಒಂದು. ಪೋಸ್ಟರ್ ಜತೆಗೆ ಆಟೋಗ್ರಾಫ್ ಇವೆಂಟ್‌ ಕೂಡ ಅಲ್ಲಿ ಇತ್ತು. ಒಂದು ವೇಳೆ ನಾನು ರೇಡಿಯೋದಲ್ಲಿ ಇದನ್ನು ಕೇಳದೇ ಇದ್ದಿದ್ದರೆ ಅಲ್ಲಿ ಹೋಗುವ ಅವಕಾಶ ವನ್ನು ತಪ್ಪಿಸಿಕೊಳ್ಳುತ್ತಿದೆ.

ಪ್ರತೀ ಸಲ ಈ ಪೋಸ್ಟರ್‌ ಸಂಗ್ರಹ ಕಾರ್ಯಕ್ರಮವು ಲಂಡನ್‌ ಅಥವಾ ಮಿಡ್‌ ಲ್ಯಾಂಡ್ಸ್‌ ನಲ್ಲಿ ನಡೆಯುತ್ತದೆ. ಈ ಬಾರಿ ನನ್ನ ಊರಿನ ಹತ್ತಿರವಿದೆ ಎಂಬ ಕಾರಣಕ್ಕೆ ಭೇಟಿ ನೀಡಿದ್ದೆ. ಅಲ್ಲಿಗೆ ಹೋದವನಿಗೆ ಅಲ್ಲಿನ ಲೋಕವೇ ಬೇರೆ ಇತ್ತು. ಅಲ್ಲಿ ಹಾಲಿವುಡ್‌ನ‌ ಹಿಟ್‌ ಸಿನೆಮಾಗಳ ನಿರ್ದೇಶಕರು, ಸಂಗೀತಗಾರರು ಇದ್ದರು, ಕ್ಲಾಸಿಕ್‌ ಸಿನೆ ಮಾಗಳ ಪೋಸ್ಟರ್‌ ಗಳು ರಾರಾಜಿಸುತ್ತಿದ್ದವು.

ನಾನು ಕನಸಿನಲ್ಲೂ ಎಣಿಸಿರಲಿಲ್ಲ ಜೇಮ್ಸ್‌ ಬಾಂಡ್‌ ಸಿನೆಮಾದ ಆರ್ಕೆಸ್ಟ್ರಾ , ನಿದೇರ್ಶಕ ರನ್ನು ಭೇಟಿ ಮಾಡ್ತೀನಿ ಎಂದು. ಮೊಟ್ಟ ಮೊದಲುJenny Hanley Actress & On Her Majesty’s Secret Service 1969 The Irish ಗರ್ಲ್ ಅವರನ್ನು ಮೀಟ್‌ ಮಾಡಿ ಆಟೋಗ್ರಾಫ್‌ ತಗೊಂಡೆ ಹಾಗೂ ಅವ್ರ ಮಗ ನನ್ನ ಫೋಟೋ ಕ್ಲಿಕ್ಕಿಸಿದ್ದರು. ಅವರು ಕೂಡ ಈಗ ರೇಡಿಯೋ ಜಾಕಿಯೇ ಆಗಿದ್ದಾರೆ. ತುಂಬಾ ಸ್ನೇಹಿಯಾಗಿ ಎಲ್ಲರೊಂದಿಗೂ ಮಾತನಾಡುತ್ತಿದ್ದರು.

Advertisement

ಅದಾದ ಅನಂತರ ನಿರ್ದೇಶಕ John Glen ಅವರನ್ನು ಭೇಟಿಯಾದೆ. ಅವರೊಂದಿಗೂ ಫೋಟೋ ತೆಗೆಸಿಕೊಂಡಿದ್ದು ಅದ್ಭುತ ಅನುಭ ವ. ಒಕ್ಟೋಪುಸ್‌ ಸಿನೆಮಾ ಬಗ್ಗೆ ಹಾಗೂ ಅವರ ಅನುಭವದ ಬಗ್ಗೆ ಅವರೊಂದಿಗೆ ಮಾತನಾಡಿದೆ. ಅವರು ಮನಬಿಚ್ಚಿ ತಮ್ಮ ಅನುಭವಗ ಳನ್ನು ಹಂಚಿಕೊಂಡರು.

ಮೊದಲನೆಯದಾಗಿ For Your Eyes Only (1981) , Octopussy (1983), A View to a Kill (1985, The Living Daylights (1987), Licence to Kill (1989) ಸಿನೆಮಾಗಳ ಪೋಸ್ಟರ್‌ ಗಳನ್ನು ಹಾಗೂ ನಿರ್ದೇಶಕರನ್ನು ಭೇಟಿ ಆದೆ. ಅ Madeline smith & Live and Let Die ಅವರನ್ನು ಮೀಟ್‌ ಮಾಡಿದೆವು. ಇವರು Miss cariso ಆಗಿ ಕಾಣಿಸಿಕೊಂಡಿದ್ದರು. ನೆರೆದಿದ್ದೆಲ್ಲ ರೊಂದಿಗೆ ತುಂಬಾ ಚೆನ್ನಾಗಿ ಬೆರೆತು ಮಾತನಾಡುತ್ತಿದ್ದರು. ಇವರ ಆಟೋಗ್ರಾಫ್ ಪಡೆಯಲು ನಾವು ಹಣ ಪಾವತಿಸಬೇಕು. ಈ ಹಣವು ಚಾರಿಟಿಗೆ ಹೋಗಲಿದೆ. ಮಾತನಾಡುತ್ತಾ ಭಾರತದ ಸಿನೆಮಾ, ಸೌತ್‌ ಸಿನೆಮಾಗಳ ಬಗ್ಗೆ ಎಲ್ಲ ಮಾತ ನಾಡಿದರು.

ಬಳಿಕ Derren Nesbitt & ( Client Eastwood ‘s Where Eagles Dare). ಇವ್ರು Clint eastwood ಜತೆ ಭೇಟಿಯಾದೆವು. ಡ್ರಾಕುಲಾ ಕಾಮಿಕ್ಸ್‌ ಗಳನ್ನು ಬರೆದ ಕಥೆಗಾರ, ಸಂಗೀತಗಾರ ಹಾಗೂ ನಟನೂ ಆದ Ü john Westwood ಅವರೊಂದಿಗೆ ಸಂವಾದಿಸಿದೆವು. ಸಿನೆಮಾ ಪೋಸ್ಟರ್, ಗ್ರಾಫಿಕ್ಸ್‌ ತಂತಜ್ಞರೆಲ್ಲರೂ ಈ ಇವೆಂಟ್‌ ನಲ್ಲಿ ಇದ್ದರು.

ಸಿನೆಮಾ ಆಸಕ್ತರು ಹೆಚ್ಚಿನ ಪೋಸ್ಟರ್ ಗಳನ್ನು ಸಂಗ್ರಹಿಸುತ್ತಿದ್ದರು. ಕೆಲವು ಸಿನೆಮಾ ಪೋಸ್ಟರ್ ಗಳು 3 ಲಕ್ಷ, 5 ಲಕ್ಷಕ್ಕೆ ಮಾರಾಟವಾಗುತ್ತಿತ್ತು. ವರ್ಷಕ್ಕೆ ನಾಲ್ಕು ಬಾರಿ ಈ ರೀತಿಯ ಕಾರ್ಯಕ್ರ ಮಗಳು ನಡೆಯುತ್ತವೆ. ಸಿನೆಮಾ ಚಿತ್ರೀಕರಣದ ಹಿಂದಿನ ಕಥೆಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. ನನಗಂತೂ ಇದು ಅತ್ಯದ್ಭುತವಾದ ಅನುಭವವಾಗಿತ್ತು.

*ಶಶಿ, ಯುಕೆ

Advertisement

Udayavani is now on Telegram. Click here to join our channel and stay updated with the latest news.

Next