Advertisement

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

01:20 AM Dec 12, 2024 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೊರ್ಗಿ ಮನೆ ಕಂಬಳ್ಳೋತ್ಸವವು ಡಿ.12ರಂದು ಮಧ್ಯಾಹ್ನ ಗಂಟೆ 2 ಕ್ಕೆ ಆರಂಭವಾಗಲಿದೆ.

Advertisement

ಈ ಕಂಬಳ ಸುಮಾರು 400 ವರ್ಷಗಳ ಇತಿಹಾಸ ಹೊಂದಿದ್ದು, ಕಂಬಳ ಗದ್ದೆಯು ಸುಮಾರು 8 ಎಕ್ರೆ ವಿಸ್ತೀರ್ಣ ಹೊಂದಿದೆ. ಕೊರ್ಗಿ ಮನೆಯ ಎದುರು ಕಂಬಳಗದ್ದೆ ಮತ್ತು ವಿಶಾಲವಾದ ಮರಿಗದ್ದೆ ಹಾಗೂ ಹಸ್ರಗದ್ದೆಗಳಿದ್ದು, ಕೊರ್ಗಿಮನೆ ಕುಟುಂಬಿಕರು ಕಂಬಳಗದ್ದೆ ಮನೆಯ ಶ್ರೀ ಸ್ವಾಮಿ, ಶ್ರೀ ನಂದಿ ಹಾಗೂ ಶ್ರೀ ವನದುರ್ಗಾದೇವಿಗೆ ಪ್ರಥಮ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಕಂಬಳಕ್ಕೆ ಚಾಲನೆ ನೀಡುವುದು ಪದ್ಧತಿ.

ಈ ಬಾರಿ ಕಂಬಳವು ಹಿಂದಿನಿಂ ದಲೂ ಕಂಬಳಕ್ಕೆ ಹೊರ ಗ್ರಾಮಗಳಿಂದ ಬರುವವರು ಮೆರವಣಿಗೆ ಮೂಲಕ ಕೋಣಗಳನ್ನು ತಂದು ಮನೆಯ ಎದುರಿನ ಹೆಬ್ಟಾಗಿಲಿನ ಕಂಬ ಗಳಿಗೆ ವಾಡಿಕೆಯಂತೆ ಕಟ್ಟುತ್ತಾರೆ. ಕೋಟ ಹಂದೆ ಮನೆತನದ ಕೋಣ ಗಳಿಗೆ ಎದುರಿನ ಕಂಬಗಳನ್ನು ಕಾದಿರಿಸು ತ್ತಿದ್ದು, ಮನೆಯ ಯಜಮಾನರು ಪ್ರಸಾದ ನೀಡಿದ ಬಳಿಕ ಕೋಣ ಗಳನ್ನು ಗದ್ದೆಗೆ ಇಳಿಸುವುದು ಸಂಪ್ರ ದಾಯ. ಕೊರ್ಗಿ, ಹೆಸ್ಕಾತ್ತೂರು ಗ್ರಾಮಸ್ಥರ ಸಹಕಾರದಿಂದ ಕಂಬಳ ನಡೆಯುತ್ತಿದೆ.

ಆತ್ರಾಡಿ ಪಡುಮನೆ ಕಂಬಳ
ಉಡುಪಿ: ಸುಮಾರು 300ರಿಂದ 400 ವರ್ಷಗಳ ಇತಿಹಾಸವಿರುವ ಉಡುಪಿ ಪರಿಸರದ ಆತ್ರಾಡಿ ಪಡುಮನೆ ಹಳೆಬೀಡು ಪಟ್ಟದ ಮನೆಯ ಸಾಂಪ್ರದಾಯಿಕ ಕಂಬಳ ಮಹೋತ್ಸವ ಡಿ.12ರಂದು ನಡೆಯಲಿದೆ.

ಹಿಂದೆ 25ರಿಂದ 30 ಜತೆ ಕೋಣಗಳು ಭಾಗವಹಿಸುತ್ತಿದ್ದು, ಇತ್ತೀಚೆಗೆ ಜಿಲ್ಲೆ, ಹೊರ ಜಿಲ್ಲೆಯ ಕೋಣಗಳು ಬರುತ್ತವೆ. ಈ ವರ್ಷ 50ರಿಂದ 60 ಜತೆ ಕೋಣಗಳು ಭಾಗವಹಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಪಟ್ಟದಮನೆ ಕುಟುಂಬಸ್ಥರು.

Advertisement

ಮಧ್ಯಾಹ್ನ ಸಾಮೂಹಿಕ ಅನ್ನಪ್ರಸಾದ ಸ್ವೀಕರಿಸಿದ ಬಳಿಕ ಸಂಜೆ 4 ಗಂಟೆ ಬಳಿಕ ಸುಮಾರು 2 ಎಕ್ರೆ ಪ್ರದೇಶದ ಕಂಬಳ ಗದ್ದೆಯಲ್ಲಿ ಕೋಣಗಳ ಓಟ ಆರಂಭವಾಗಿ ತಡರಾತ್ರಿ 12 ಗಂಟೆಯವರೆಗೂ ನಡೆಯಲಿದೆ. ಮೂರು ವಿಭಾಗದಲ್ಲಿ ಪ್ರಥಮ, ದ್ವಿತೀಯ ಚಿನ್ನ/ನಗದು ಬಹುಮಾನ, ಕೋಣಗಳನ್ನು ಓಡಿಸಿದವರಿಗೂ ಬಹುಮಾನ ನೀಡಲಾಗುತ್ತಿದೆ.

ದೈವಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಕಂಬಳ ಇದಾಗಿದ್ದು, ಕಂಬಳಕ್ಕೂ ಮುನ್ನ ಪಂಜುರ್ಲಿ, ನಾಗದೇವರು, ಮಹಿಸಂದಾಯ ಸಹಿತ 6ಕ್ಕೂ ಅಧಿಕ ದೈವಗಳಿಗೆ ಪೂಜೆ ಸಲ್ಲಿಸಲಾಗುತ್ತದೆ ಎನ್ನುತ್ತಾರೆ ಕುಟುಂಬಸ್ಥರು.

ಕುಚ್ಚಾರು ಕಂಬಳ
ಹೆಬ್ರಿ: ಇತಿಹಾಸ ಪ್ರಸಿದ್ಧ ಹಾಗೂ ಉಡುಪಿ ಜಿಲ್ಲೆಯಲ್ಲಿ 2ನೇ ಅತಿದೊಡ್ಡ ಸಾಂಪ್ರದಾಯಿಕ ಕಂಬಳ ಎಂಬ ಹೆಸರು ಪಡೆದ ಕುಚ್ಚಾರು ಶ್ರೀ ಕೊಡಮಣಿತ್ತಾಯ ಮತ್ತು ಧೂಮಾವತಿ ಗರಡಿಯ ಸಾಂಪ್ರದಾಯಿಕ ಕುಚ್ಚಾರು ಕಂಬಳವು ಡಿ.12ರಂದು ನಡೆಯಲಿದೆ.

ಸುಮಾರು 6 ಶತಮಾನಗಳಿಂದ ಸೂರಾಲ್‌ ಅರಮನೆಯವರ ಜೈನ ಅರಸರು ಕುಚ್ಚಾರಲ್ಲಿ ಕೊಡಮಣಿತ್ತಾಯ ದೈವಗಳನ್ನು ಊರಿನ ಶ್ರೇಯೋಭಿವೃದ್ಧಿಗಾಗಿ ಆರಾಧಿಸುತ್ತಿದ್ದಾರೆ. ಅಲ್ಲಿನ ದೈವಕ್ಕೆ ಕೋಲ ನೇಮದ ಆಚರಣೆ ಮಾಡುತ್ತಾ ಕುಚ್ಚಾರು ಮಾತ್‌ ಕಲ್ಲು ಸಾನ್ನಿಧ್ಯದಲ್ಲಿ ಕಂಬಳವನ್ನು ಆಯೋಜಿಸುತ್ತಿದ್ದರು.

ಕುಚ್ಚಾರು ದೊಡ್ಡ ಮನೆಯವರ ಯಜಮಾನಿಕೆಯಲ್ಲಿ 500 ವರ್ಷಗಳಿಂದ ಕಂಬಳ ನಡೆಯುತ್ತಿತ್ತು. ಕಾರಣಾಂತರ ಗಳಿಂದ 35 ವರ್ಷ ಸ್ಥಗಿತಗೊಂಡಿತ್ತು. 2011ರಲ್ಲಿ ಕೊಡಮ ಣಿತ್ತಾಯ ಟ್ರಸ್ಟ್‌ ರಚಿಸಿ ದೊಡ್ಡ ಮನೆಗೆ ಸೇರಿದ ಕಿರಣ್‌ ತೋಳಾರ್‌ಮತ್ತು ಕಂಬ ಳದ ಮನೆ ಚಾರ್ಮಕ್ಕಿ ಸತೀಶ್‌ ಶೆಟ್ಟಿ ಸಹಾಯದಿಂದ 13 ವರ್ಷಗಳಿಂದ ನಡೆಸಲಾಗುತ್ತಿದೆ. ಪ್ರಸ್ತುತ 50ಕ್ಕಿಂತ ಹೆಚ್ಚು ಕೋಣಗಳು ಭಾಗವಹಿಸುತ್ತಿವೆ.

ಬಾರಾಡಿಬೀಡು ಕಂಬಳ ಮುಂದೂಡಿಕೆ
ಕಾರ್ಕಳ: ಕಾಂತಾವರದಲ್ಲಿ ಡಿ.14ರಂದು ನಡೆಯ ಬೇಕಿದ್ದ ಬಾರಾಡಿಬೀಡು ಕಂಬಳ ಕಾರಣಾಂತರಗಳಿಂದ ಮುಂದೂ ಡಲಾಗಿದೆ ಎಂದು ಬಾರಾಡಿಬೀಡು ಕುಟುಂಬಸ್ಥರಾದ ಡಾ| ಜೀವಂಧರ್‌ ಬಲ್ಲಾಳ್‌ ಮತ್ತು ಕಂಬಳ ಸಮಿತಿ ಅಧ್ಯಕ್ಷ ಡಾ| ದೇವಿ ಪ್ರಸಾದ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next