Advertisement
ನೂರಾರು ವರ್ಷಗಳ ಇತಿಹಾಸವಿರುವ ತಗ್ಗರ್ಸೆ ಕಂಠದಮನೆ ಟಿ.ನಾರಾಯಣ ಹೆಗ್ಡೆಯವರ ಮನೆಯ ಕಂಬಳವು ಸಾಂಪ್ರದಾಯಿಕ ರೀತಿಯಲ್ಲೇ ನಡೆಯಲಿದೆ.
Related Articles
ಇಲ್ಲಿನ ಕಂಬಳಗದ್ದೆ ಅತ್ಯಂತ ವಿಶಾಲವಾದ ಆಯತಾಕಾರದಿಂದ ಕೂಡಿದೆ. ಈಗೀಗ ಕೋಣಗಳಿಗಿ ಬಹು ಮಾನಗಳಿದ್ದರೂ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಕೈಬಿಡುವುದಿಲ್ಲ. ಸೂತಕ, ಮೈಲಿಗೆಯಾದವರು ಗದ್ದೆಗೆ ಇಳಿಯುವಂತಿಲ್ಲ. ಕೊಲ್ಲೂರು ರಸ್ತೆಯಿಂದ ಉತ್ಸವದ ದಿನ ಕೋಣಗಳು ಮೆರವಣಿಗೆಯಲ್ಲಿ ಸಾಗುತ್ತವೆ. ಮಾತ್ರವಲ್ಲದೆ ಬೈಂದೂರು ಭಾಗದ ಹಬ್ಬದಂತೆ ಈ ಉತ್ಸವವನ್ನು ಆಚರಿಸಲಾಗುತ್ತದೆ.
Advertisement
ಜಾನುವಾರುಗಳನ್ನು ಕಂಬಳಗದ್ದೆಗೆ ಸುತ್ತು ಹಾಕಿಸಿ ನೀರಿನ ಪ್ರೋಕ್ಷಣೆ ಮಾಡಲಾಗುತ್ತದೆ.ಈ ಕಂಬಳವನ್ನು ನಮ್ಮ ಅನಾದಿ ಕಾಲ ದಿಂದಲೂ ಹಿರಿಯರು ನಡೆಸಿ ಕೊಂಡು ಬಂದಿದ್ದು, 65 ವರ್ಷಗಳಿಂದ ನಮ್ಮ ಮುಂದಾಳತ್ವದಲ್ಲಿ ನಡೆಯು ತ್ತಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಕಂಬಳ ನಡೆಯುತ್ತದೆ. ಇದು ಬೈಂದೂರಿನ ಅತಿ ದೊಡ್ಡ ಕಂಬಳ್ಳೋತ್ಸವವಾಗಿದೆ ಎಂದು ಕಂಬಳ ಮನೆಯವರಾದ ಟಿ.ನಾರಾಯಣ ಹೆಗ್ಡೆ ತಗ್ಗರ್ಸೆ ಹೇಳುತ್ತಾರೆ. ಪುರಾತನ ವಂಡಾರು ಕಂಬಳ
ಕೋಟ: ಅತಿ ಪುರಾತನ ವಂಡಾರು ಸಾಂಪ್ರದಾಯಿಕ ಕಂಬಳವು ಡಿ. 6ರಂದು ನಡೆಯಲಿದೆ. ಇಲ್ಲಿ ಯಾವುದೇ ಸ್ಪರ್ಧೆಯ ರೂಪ ದಲ್ಲಿರದೆ, ಹರಕೆಯೇ ಪ್ರಧಾನವಾಗಿ ಕಂಬಳ ನಡೆದು ಕೊಂಡು ಬಂದಿದೆ. ಪಾಂಡವರು ನಿರ್ಮಿ ಸಿದ್ದು ಎಂದು ನಂಬಲಾಗಿರುವ 10 ಎಕ್ರೆ ವಿಸ್ತೀರ್ಣದ ಗದ್ದೆಯಲ್ಲಿ ಕಂಬಳ ನಡೆಯಲಿದೆ.ವಂಡಾರಿನ ಹೆಗ್ಡೆ ಮನೆತನದವರು ಈ ಕಂಬಳ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ 50 ವರ್ಷಗಳಿಂದಲೂ ಈ ಮನೆತನದ ಪಟ್ಟದ ಹೆಗ್ಡೆಯವರಾದ ಪ್ರವೀಣ್ ಹೆಗ್ಡೆ ನೇತೃತ್ವದಲ್ಲಿ ಈ ಕಂಬಳ ನಡೆಯುತ್ತಿದೆ. ಮನೆ ದೇವರು ತುಳಸಿ ಅಮ್ಮ, ನಿಗಳೇಶ್ವರನ ಗುಡಿ ಪೂಜೆ ಸಲ್ಲಿಸಲಾಗುತ್ತದೆ. ಡಿ.7ರಂದು ತುಳಸಿ ಅಮ್ಮನಿಗೆ ಗೆಂಡೋತ್ಸವ ನಡೆಯುತ್ತದೆ.