ಕುಂದಾಪುರ: ಬೈಂದೂರು ತಾಲೂಕಿನ ಉಳ್ಳೂರು 11 ಗ್ರಾಮದ ಕೆರೆಗದ್ದೆ ಕಂಬಳಕ್ಕೂ ಶತಮಾನಗಳ ಇತಿಹಾಸವಿದೆ. ಈ ಬಾರಿ ಈ ಕಂಬಳ ನ. 28 ರಂದು ನಡೆಯಲಿದೆ.
ಇಲ್ಲಿ ನೂರಾರು ವರ್ಷಗಳಿಂದ ಕಂಬಳ ನಡೆಯುತ್ತಿದ್ದು, ಮಧ್ಯೆ ಒಮ್ಮೆ ನಿಂತಿದ್ದು, ಆ ಬಳಿಕ ಕೆರೆಗದ್ದೆ ಮನೆತನದವರು, ಉಳ್ಳೂರಿನ ಕಂಬಳ ಅಭಿಮಾನಗಳ ಬಳಗ ಒಟ್ಟಾಗಿ ಈ ಕಂಬಳವನ್ನು ಪ್ರತೀ ವರ್ಷ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿದೆ.
ಕಂಬಳ ದಿನ ಮೊದಲಿಗೆ ಊರಿನ ಕಾಲಭೈರವ ದೇವರಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಆ ಬಳಿಕ ಕಂಬಳಗದ್ದೆಗೆ ಪೂಜೆ ಸಲ್ಲಿಸಿ, ಕಂಬಳ ಆರಂಭಗೊಳ್ಳುತ್ತದೆ.
50 ಕ್ಕೂ ಮಿಕ್ಕಿ ಕೋಣಗಳು ಪ್ರತೀ ವರ್ಷ ಈ ಕಂಬಳದಲ್ಲಿ ಪಾಲ್ಗೊಳ್ಳುತ್ತವೆ.
ಕೊನೆಯದಾಗಿ ಕೆರೆಗದ್ದೆ ಮನೆತನದವರ ಕೋಣಗಳನ್ನು ಕಂಬಳಗದ್ದೆಗೆ ಇಳಿಸುವ ಮೂಲಕ ಕಂಬಳ ಕೊನೆಗೊಳ್ಳುತ್ತದೆ. ಕೆರೆಗದ್ದೆ ಮನೆತನದ ಲಿಂಗ ಗಾಣಿಗರು, ರಾಮ ಗಾಣಿಗರು, ಈಗ ಶಂಕರ ಗಾಣಿಗರು ಈ ಕಂಬಳದ ನೇತ್ವ ವಹಿಸಿದ್ದು, ಅವರೊಂದಿಗೆ ಮನೆಯವರು, ಊರಿನ ಕಂಬಳ ಅಭಿಮಾನಿ ಬಳಗದವರ ಸಹಕಾರದೊಂದಿಗೆ ಕಂಬಳ ನಡೆಯುತ್ತಿದೆ.