Advertisement
ಸುಮಾರು 600 ವರ್ಷ ಇತಿಹಾಸವಿರುವ ಈ ಕಂಬಳವು ಪಟ್ಟದ ಹೆಗ್ಡೆಯವರಾದ ಜಯರಾಮ ಹೆಗ್ಡೆ ಅವರ ನೇತೃತ್ವದಲ್ಲಿ ನಡೆಯಲಿದೆ. ಇದು ಅನಾದಿಕಾಲದ ಜೈನ ಮನೆತನದವರ ಕಂಬಳ. ಸುಮಾರು 10 ಎಕ್ರೆ ವಿಸ್ತೀರ್ಣದ ಕಂಬಳಗದ್ದೆ ಹಾಗೂ ಬಾಕಿಮಾರು ಗದ್ದೆಗಳನ್ನು ಹೊಂದಿದ್ದು, ಮನಸೂರೆಗೊಳ್ಳುವ ಪ್ರಕೃತಿ ಸೌಂದರ್ಯವಿದೆ.
Related Articles
ಕೋಟ: ಸುಮಾರು 900 ವರ್ಷಗಳ ಇತಿಹಾಸವಿರುವ ಬನ್ನಾಡಿ ಗರಡಿಯ ಬ್ರಹ್ಮಬೈದರ್ಕಳ ಹಾಗೂ ಶಿವರಾಯ ದೇವರ ಹೆಸರಲ್ಲಿ ನಡೆಯುವ ಬನ್ನಾಡಿಯ ಕಂಬಳವು ಈ ಬಾರಿ ಡಿ.9ರಂದು ಜರಗಲಿದೆ.
Advertisement
ಬೆಳಗ್ಗೆ ಗರಡಿಯಲ್ಲಿ ಪೂಜೆ ಸಲ್ಲಿಸಿ, ಚಿತ್ತೇರಿ ನಾಗ ಬ್ರಹ್ಮಲಿಂಗೇಶ್ವರ, ಬನ್ನಾಡಿ ಶ್ರೀಸಿದ್ದೇಶ್ವರ, ವಡ್ಡರ್ಸೆಯ ಮಹಾಲಿಂಗೇಶ್ವರ, ಉಪ್ಲಾಡಿಯ ಗೋಪಾಲಕೃಷ್ಣ, ಅಚ್ಲಾಡಿಯ ಶ್ರೀ ಸಿದ್ಧಿವಿನಾಯಕ, ಹೆಗ್ಗರಡಿಯ ನಂದಿ, ಚಿಕ್ಕಮ್ಮ ನಾಗ, ಬ್ರಹ್ಮಲಿಂಗೇಶ್ವರ ಮತ್ತು ಪರಿವಾರ, ಬೇಳೂರು ದೇಲಟ್ಟು ಮಹಾಲಿಂಗೇಶ್ವರನನ್ನು ಸ್ಮರಿಸಿಕೊಂಡು ಮನೆ ಕೋಣಗಳು ಡೋಲು, ಚೆಂಡೆ, ವಾದ್ಯ ಸಮೇತ ಭವ್ಯ ಮೆರವಣಿಗೆಯಲ್ಲಿ ಚಿತ್ತೇರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಕಂಬಳಗದ್ದೆಗೆ ಇಳಿಸಲಾಗುತ್ತದೆ. ಕಂಬಳಗದ್ದೆ ಮನೆಯ ಹಿರಿಯರೊಬ್ಬರು ತಮ್ಮ ತಂಡದೊಂದಿಗೆ ಅತ್ಯಂತ ಶ್ರದ್ಧಾಭಕ್ತಿಯಿಂದ ಕಂಬಳಗದ್ದೆಯಲ್ಲಿ ಗೋರಿ ಏರಿ ದಡ ಸೇರಿದ ತರುವಾಯ ಕಂಬಳಕ್ಕೆ ಬರುವ ಕೋಣಗಳನ್ನು ಸ್ವಾಗತಿಸಲಾಗುತ್ತದೆ.
ಬನ್ನಾಡಿ ನಾಲ್ಕು ಮನೆಯವರು, ಗ್ರಾಮಸ್ಥರು ಹಾಗೂ ಕಂಬಳಾಭಿಮಾನಿಗಳ ಸಹಕಾರದೊಂದಿಗೆ ಪ್ರಸ್ತುತ ಸ್ಪರ್ಧಾ ಕಂಬಳ ಆಯೋಜಿಸಲಾಗುತ್ತದೆ.
ಈ ಕಂಬಳಕ್ಕೆ ಹಿಂದೆ ಬನ್ನಾಡಿ ಸುತ್ತಮುತ್ತಲಿನ ಪ್ರದೇಶಗಳಾದ ಅಚ್ಲಾಡಿ, ವಡ್ಡರ್ಸೆ, ಏಳಹಕ್ಲು, ಕೊತ್ತಾಡಿ, ಉಪ್ಲಾಡಿ ಹೀಗೆ ಎಲ್ಲ ಕಡೆಗಳಿಂದ ಹೋರಿಗಳನ್ನು ಹರಕೆ ರೀತಿಯಲ್ಲಿ ಕರೆದುಕೊಂಡು ಬರಲಾಗುತ್ತಿತ್ತು. ಕಾಲಕ್ರಮೇಣ ಬದಲಾದ ಕೃಷಿ ಪದ್ಧತಿಯಲ್ಲಿ ಕೋಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೆ ಈಗಲೂ ಕಂಬಳಕ್ಕೆ ಖಾಯಂ ಕೋಣಗಳನ್ನು ತರಲೇಬೇಕಾದ ಅನೇಕ ಮನೆತನಗಳಿವೆ.
ಈಚೆಗಿನ ಮೂರು ವರ್ಷಗಳಿಂದ ಸ್ಪರ್ಧೆಯ ರೀತಿಯಲ್ಲಿ ಕಂಬಳ ನಡೆಯುತ್ತಿದ್ದು, ಸಂಜೆ ಸೂಡಿ ಬೆಳಕಿನಲ್ಲಿ ಮನೆ ಹೋರಿಗಳನ್ನು ಕಂಬಳಗದ್ದೆಗೆ ಇಳಿಸಿ ಓಡಿಸುವುದರೊಂದಿಗೆ ಕಂಬಳ ಸಮಾಪ್ತಿಗೊಳ್ಳುತ್ತದೆ. ಅನಂತರ ಸಿದ್ದೇಶ್ವರನಿಗೆ ಮಹಾ ರಂಗಪೂಜೆ ನೀಡಲಾಗುತ್ತದೆ.