Advertisement
ಹಿಂದಿನ ಕಾರ್ಡ್‌ಗಳ ನವೀಕರಣ ಮತ್ತು ಹೊಸ ಕಾರ್ಡ್‌ಗಳ ನೋಂದಣಿಗೆ ಅವಕಾಶವಿದ್ದು, ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಾತ್ರ ಈ ಯೋಜನೆ ಸೀಮಿತ. ಎಲ್ಲ ಸದಸ್ಯರ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಡಿ. 17ರಿಂದ ಜ. 10 ರ ಒಳಗಾಗಿ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ, ಮಾಧವ ಮಂಗಲ ಸಮು ದಾಯ ಭವನ, ಅಂಬಲಪಾಡಿ ಮತ್ತು ಮೊಗವೀರ ಯುವ ಸಂಘ ಟನೆಯ ವಿವಿಧ ಘಟಕಗಳಲ್ಲಿ ನೋಂದಾಯಿಸ ಬಹುದು.
ಕಡಿಮೆ ವರಮಾನದ ಕುಟುಂಬಗ ಳಿಗೆ ಈ ಯೋಜನೆ ವರದಾನ. ಮಣಿ ಪಾಲ ಆಸ್ಪತ್ರೆಯ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಯಲ್ಲಿ ಶೇ.50, ಕಟೀಲು ದುರ್ಗಾ ಸಂಜೀವಿನಿ ಮಣಿ ಪಾಲ ಆಸ್ಪತ್ರೆ ಶೇ. 50, ಮಂಗಳೂರು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆ ಶೇ. 50, ಮಂಗಳೂರು ಅಂಬೇಡ್ಕರ್ ಸರ್ಕಲ್ ಕೆಎಂಸಿ ಆಸ್ಪತ್ರೆ ಶೇ. 25, ಕಾರ್ಕಳ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆ ಶೇ. 20, ಉಡುಪಿ ಟಿ.ಎಂ.ಎ. ಪೈ ಆಸ್ಪತ್ರೆ ಶೇ. 20 ರಷ್ಟು ರಿಯಾಯಿತಿ ಇರುತ್ತದೆ. ಕಾರ್ಡ್‌ನ ಸದಸ್ಯರು ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾದಲ್ಲಿ ಯಾವುದೇ ನಿರ್ಬಂಧವಿಲ್ಲದೆ ಶೇ. 35 ರಿಯಾಯಿತಿ ಸೌಲಭ್ಯ ಪಡೆಯ ಬಹುದು (ಮಂಗಳೂರು ಅಂಬೇಡ್ಕರ್ ಸರ್ಕಲ್ ಕೆಎಂಸಿ ಆಸ್ಪತ್ರೆಯನ್ನು ಹೊರತುಪಡಿಸಿ). ಒಂದು ಕುಟುಂಬ ಅಥವಾ ಕುಟುಂಬದ ಸದಸ್ಯರು ಯಾವುದೇ ಒಂದು ಘಟಕದಲ್ಲಿ ರಿಯಾಯಿತಿ ಸೌಲಭ್ಯ ಯೋಜನೆಗೆ ನೋಂದಾ ಯಿಸಿ ಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ಘಟಕಗಳಲ್ಲಿ ನೋಂದಾಯಿಸಿ ಕೊಂಡರೆ ಅಂತಹ ವ್ಯಕ್ತಿಯ ಅಥವಾ ಕುಟುಂಬದ ಯೋಜನೆಯ ಸದಸ್ಯತ್ವವನ್ನು ರದ್ದುಪಡಿ ಸಲಾಗುತ್ತದೆ ಎಂದು ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ್ ಕೋಡಿ ತಿಳಿಸಿದ್ದಾರೆ.