Advertisement

Kambala ಕುಂದಾಪುರ: ಚೋರಾಡಿ ಸಾಂಪ್ರದಾಯಿಕ ಕಂಬಳ ರದ್ದು

01:14 AM Dec 11, 2024 | Team Udayavani |

ಕುಂದಾಪುರ: ಬುಧವಾರ (ಡಿ. 11) ದಂದು ನಡೆಯಬೇಕಿದ್ದ ಚೋರಾಡಿ ಸಾಂಪ್ರದಾಯಿಕ ಕಂಬಳವು ಅನಿವಾರ್ಯ ಕಾರಣದಿಂದ ರದ್ದಾಗಿದೆ.

Advertisement

ಕಂಬಳ ನಡೆಸುವ ಮನೆತನದವರೊಬ್ಬರು ಕೆಲವು ದಿನಗಳ ಹಿಂದೆ ನಿಧನ ಹೊಂದಿದ್ದು, ಸೂತಕದ ಹಿನ್ನೆಲೆಯಲ್ಲಿ ಕಂಬಳವನ್ನು ರದ್ದುಪಡಿಸಲಾಗಿದೆ.

ಡಿ. 15ಕ್ಕೆ ಸೂತಕ ಮುಗಿಯಲಿದೆ. ಸಾಂಪ್ರದಾಯಿಕ ಕಂಬಳಗಳು ವೃಶ್ಚಿಕ ಸಂಕ್ರಮಣದಿಂದ ಆರಂಭಗೊಂಡು ಧನು ಸಂಕ್ರಮಣದೊಳಗೆ ಮುಗಿಯಬೇಕಿದ್ದು, ಈವರೆಗೆ ಡಿ. 15 ರ ಬಳಿಕ ಕಂಬಳ ನಡೆದಿಲ್ಲ. ಹಾಗಾಗಿ ಈ ಬಾರಿಯ ಚೋರಾಡಿ ಕಂಬಳವನ್ನು ರದ್ದುಪಡಿಸಲು ಮನೆಯವರು ತೀರ್ಮಾನಿಸಿದ್ದಾರೆ.

ಡಿ. 16ರಂದು ಇಲ್ಲಿನ ಶ್ರೀ ತೀರ್ಥ ಹರ ವಿನಾಯಕ ದೇವರಿಗೆ ಪೂಜೆ ಸಲ್ಲಿಸಿ, ಕಂಬಳಗದ್ದೆಗೆ ತೀರ್ಥ ಹಾಕಿ, ಮನೆಯ ಕೋಣಗಳನ್ನು ಸಿಂಗರಿಸಿ, ಕಂಬಳಗದ್ದೆಗೆ ಇಳಿಸುವ ಮೂಲಕ ಕಂಬಳ ನಡೆಯದಿದ್ದರೂ, ಸಾಂಕೇತಿಕವಾಗಿ ಆಚರಣೆಗಳನ್ನು ಮಾತ್ರ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚೋರಾಡಿ ಕಂಬಳಗದ್ದೆ ಮನೆತನದ ಭಾಸ್ಕರ ಶೆಟ್ಟಿಯವರು “ಉದಯವಾಣಿ”ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next