Advertisement
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಕೇಂದ್ರ ಸರಕಾರಕ್ಕೆ ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂಬುದಕ್ಕೆ ಹಲವು ನಿದರ್ಶನಗಳು ಕಾಣಸಿಗುತ್ತಿವೆ. ಪ್ರಧಾನಿ ಮೋದಿ ನಿರಂತರವಾಗಿ ಸಿಬಿಐ, ಚುನಾವಣ ಆಯೋಗದ ಮೇಲೆ ತನ್ನ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ರಫೇಲ್ ಹಗರಣದ ಬಗ್ಗೆ ಸಿಬಿಐ ಹೆಚ್ಚು ಆಸಕ್ತಿ ವಹಿಸಿ ತನಿಖೆ ನಡೆಸಲಾರಂಭಿಸಿದಂತೆ ತಮ್ಮ ಬಂಡವಾಳ ಬಯಲಾಗುವ ಭಯದಿಂದ ಸಿಬಿಐ ನಿರ್ದೇಶಕ ಆಲೋಕ್ ವರ್ಮಾ ಅವರನ್ನು ಅವರ ಸ್ಥಾನದಿಂದ ತೆರವುಗೊಳಿಸಲಾಯಿತು. ಬದಲಿಗೆ ಅವರಿಗೆ ಬೇಕಾದ ವ್ಯಕ್ತಿಗಳನ್ನು ನಿರ್ದೇಶಕರಾಗಿ ನೇಮಕ ಮಾಡಿದ್ದಾರೆ. ಬಿಜೆಪಿಯು ಸಿಬಿಐ ಮೇಲೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರಿಗೆ ಸಾಲ ನೀಡುವ ಬದಲಾಗಿ ಉದ್ಯಮಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಿದೆ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯರಂತಹ ಉದ್ಯಮಿಗಳು ದೇಶಕ್ಕೆ ಕೋಟ್ಯಂತರ ರೂ. ವಂಚಿಸಿದರೂ ಇವರಿಗೆ ಚಿಂತೆ ಇಲ್ಲ. ಕೇಂದ್ರ ಸರಕಾರ ಬಡ ಸಾಮಾನ್ಯ ಜನರ ಮೇಲೆ ಹೊರೆ ಹಾಕುವ ಯೋಜನೆಗಳನ್ನು ಮಾಡುತ್ತಿದ್ದಾರೆ. ಉದ್ಯಮಿಗಳನ್ನು ಓಲೈಕೆ ಮಾಡುವ ಭರದಲ್ಲಿ ಕೇಂದ್ರ ಸರಕಾರ ಜನಸಾಮಾನ್ಯರ ಜೀವ ಹಿಂಡುತ್ತಿದೆ ಎಂದರು.