Advertisement

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

11:52 PM Jan 09, 2025 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ದಲಿತ ಶಾಸಕರು, ಸಚಿವರಿಗೆ ಊಟ ಮಾಡಲೂ ಸ್ವಾತಂತ್ರ್ಯ ಇಲ್ಲ. ಎಸ್‌ಸಿ-ಎಸ್‌ಪಿ, ಟಿಎಸ್‌ಪಿ ಹಣ ವರ್ಗಾವಣೆ, ವಾಲ್ಮೀಕಿ ನಿಗಮದ ಹಣ ದುರುಪಯೋಗದ ಬಗ್ಗೆ ಕಾಂಗ್ರೆಸ್‌ ನಾಯಕರಿಗೂ ಅಸಮಾಧಾನ ಇದೆ. ಕಷ್ಟ-ಸುಖ ಹಂಚಿಕೊಳ್ಳಬಾರದು ಎಂದರೆ ಹೇಗೆ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಶ್ನಿಸಿದರು.

Advertisement

ಮಾಧ್ಯಮದವರೊಂದಿಗೆ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ಸಚಿವರೊಬ್ಬರು ಔತಣ ಕೂಟ ಆಯೋಜಿಸಿದ ಕೂಡಲೇ ರದ್ದು ಮಾಡಿದ್ದಾರೆ. ಅದರಲ್ಲೂ ಡಾ| ಪರಮೇಶ್ವರ್‌ ಹಿರಿಯರು, ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಊಟ ಮಾಡಲೂ ಬಿಡುವುದಿಲ್ಲ ಎಂದರೆ ಏನರ್ಥ? ಅಲ್ಲದೆ ಸಿದ್ದರಾಮಯ್ಯ ಅನಂತರ ನಮ್ಮ ಗತಿಯೇನು? ಜೈಲಿಗೆ ಹೋಗಿ ಬಂದ ಭ್ರಷ್ಟ ವ್ಯಕ್ತಿ ಅಧಿಕಾರಕ್ಕೆ ಬಂದರೆ ಹೇಗೆ? ಹೀಗೆ ಸಾಕಷ್ಟು ವಿಷಯಗಳು ಕಾಂಗ್ರೆಸ್‌ನಲ್ಲಿರುವ ಎಸ್‌ಸಿ-ಎಸ್‌ಟಿ ಸಚಿವರನ್ನು ಕಾಡುತ್ತಿದೆ. ಬರೆದಿಟ್ಟುಕೊಳ್ಳಿ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದರು.

ಸಂಕ್ರಮಣ ಬಳಿಕ ನಡ್ಡಾ ಭೇಟಿ: ಯತ್ನಾಳ್‌
ಬಿಜೆಪಿ ಭಿನ್ನರ ತಂಡವು ಸಂಕ್ರಾಂತಿ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲು ಚಿಂತನೆ ನಡೆಸಿದೆ. ಈಗಾಗಲೇ ಪ್ರತ್ಯೇಕವಾಗಿ ವಕ್ಫ್ ಹೋರಾಟದಲ್ಲಿ ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇತೃತ್ವದ ತಂಡವು ರಾಜ್ಯ ಬಿಜೆಪಿ ನಾಯಕತ್ವ ವಿರುದ್ಧವೂ ಧ್ವನಿ ಎತ್ತಿತ್ತು. ಇದೀಗ ಸ್ವತಃ ಯತ್ನಾಳ್‌ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ಸಂಕ್ರಮಣದ ಅನಂತರ ನಡ್ಡಾರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. ಸದ್ಯದಲ್ಲೇ ಬರಲಿರುವ ಸಂಕ್ರಾಂತಿ ಹಬ್ಬ ಮತ್ತು ವಿಜಯಪುರದಲ್ಲಿ ಜಾತ್ರೆಯ ಕಾರಣವನ್ನು ಇದಕ್ಕೆ ಅವರು ನೀಡಿದ್ದಾರೆ.

ಈಚೆಗೆ ಜೆ.ಪಿ. ನಡ್ಡಾ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಭಿನ್ನರ ತಂಡದ ಪರ ಮಾತನಾಡಲು ಮುಂದಾಗಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಜತೆಗೆ ಮಾತುಕತೆ ನಡೆಸಲು ನಿರಾಕರಿಸಿದ್ದರು. ಆದರೆ ಬಿ.ವೈ. ವಿಜಯೇಂದ್ರ, ಆರ್‌. ಅಶೋಕ್‌, ಛಲವಾದಿ ನಾರಾಯಣ ಸ್ವಾಮಿ ಸೇರಿ ಕೆಲವರ ಜತೆಗೆ ಪ್ರತ್ಯೇಕವಾಗಿ ಮುಖಾಮುಖೀ ಚರ್ಚೆ ಮಾಡಿ ಮಾಹಿತಿಗಳನ್ನು ಪಡೆದುಕೊಂಡಿದ್ದರು. ಇದು ಯತ್ನಾಳ್‌ ತಂಡದ ಆಕ್ರೋಶಕ್ಕೂ ಕಾರಣವಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next