Advertisement

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

09:11 PM Dec 30, 2024 | Team Udayavani |

ಬೆಂಗಳೂರು: ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಲವರಿಗೆ ವಂಚಿಸಿದ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಡಿ.ಕೆ.ಸುರೇಶ್ ಸೋಮವಾರ(ಡಿ30) ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

“ಐಶ್ವರ್ಯ ಗೌಡ ಅಲಿಯಾಸ್ ನವ್ಯಶ್ರೀ ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡು ಹಲವಾರು ಜನರಿಗೆ ಚಿನ್ನ ಮತ್ತು ನಗದು ವಂಚಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆಕೆಯ ವಿರುದ್ಧ ಅಧಿಕಾರಿಗಳು ಕಠಿನ ಕ್ರಮ ಕೈಗೊಂಡು ಭವಿಷ್ಯದಲ್ಲಿ ದುರುಪಯೋಗ ಮತ್ತು ವಂಚನೆಯನ್ನು ತಡೆಯಬೇಕು” ಎಂದು ಡಿ.ಕೆ.ಸುರೇಶ್ ಒತ್ತಾಯಿಸಿದರು.

ನಗರದ ಚಂದ್ರಾ ಲೇಔಟ್‌ನಲ್ಲಿರುವ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಮಾಲಕಿ ವನಿತಾ ಐತಾಳ್ ನೀಡಿದ ದೂರಿನ ಮೇರೆಗೆ ಮಹಿಳೆ ಐಶ್ವರ್ಯ ಗೌಡ ಮತ್ತು ಆಕೆಯ ಪತಿ ಹರೀಶ್ ಕೆ. ಎನ್ ಎಂಬುವರನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ?: ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರಿ ಮಾಲಿಕರಿಗೆ 14 ಕೆಜಿ ಚಿನ್ನ ವಂಚಿಸಿದ ಪ್ರಕರಣದಲ್ಲಿ ಎ1 ಐಶ್ವರ್ಯ ಗೌಡ, ಎ2 ಹರೀಶ್‌ ಗೌಡರನ್ನು ಚಂದ್ರ ಲೇಔಟ್‌ ಪೊಲೀಸರು ಬಂಧಿಸಿದ್ದರು. ಡಿ.ಕೆ.ಸುರೇಶ್‌ ತಂಗಿ ಅಂತ ಹೇಳಿಕೊಂಡು ಬಣ್ಣ ಬಣ್ಣದ ಮಾತನಾಡಿ, ನಾಮ ಹಾಕಿದ್ದ ಐಶ್ವರ್ಯ ಮತ್ತು ಆಕೆಯ ಪತಿ ವಿಚಾರಣೆಗಾಗಿ ಚಂದ್ರಲೇಔಟ್‌ ಠಾಣೆಗೆ ಹಾಜರಾಗಿದ್ದರು. ಸುಮಾರು 3 ಗಂಟೆಗಳ ಪೊಲೀಸರ ವಿಚಾರಣೆ ಬಳಿಕ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ‌

Advertisement

Udayavani is now on Telegram. Click here to join our channel and stay updated with the latest news.

Next