Advertisement
ಬಳ್ಳಾರಿಯಲ್ಲಿ ಈ ಕುರಿತು ಮಾತನಾಡಿದ ಅವರು ಬೀದರ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ತುಂಬಾ ಗಂಭೀರವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕಿತ್ತು, ಇಲ್ಲದಿದ್ದರೆ ಸಿಎಂ ಆದ್ರೂ ರಾಜೀನಾಮೆ ಪಡೆದುಕೊಳ್ಳಬೇಕಿತ್ತು ಆದರೆ ಮುಖ್ಯಮಂತ್ರಿ ಆ ಧೈರ್ಯ ಮಾಡಲಿಲ್ಲ ಎಂದು ಹೇಳಿದರು.
Related Articles
ಈ ರೀತಿ ಸಾಕಷ್ಟು ಜನರು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಲಿಂಗ ಸ್ವಾಮೀಜಿ, ಮಣಿಕಂಠ ರಾಠೋಡ್, ಚಂದು ಪಾಟೀಲ್, ಬಸವರಾಜ ಮತ್ತು ಮೂಡ್ ಕೊಲೆ ಮಾಡೋದಕ್ಕೆ ಸುಪಾರಿ ಕೊಟ್ಟಿದ್ದಾರೆ. ಇದೆಲ್ಲ ಸಚಿನ್ ಬರೆದಿರುವ ಡೆತ್ ನೋಟ್ ನಲ್ಲಿ ಉಲ್ಲೇಖ ಆಗಿದೆ.
Advertisement
ಸಿ.ಟಿ. ರವಿ ವಿಚಾರದಲ್ಲಿ ಪೊಲೀಸರು ಉಗ್ರಗಾಮಿಗಳ ರೀತಿ ನಡೆಸಿಕೊಂಡಿದ್ರು. ಮುನಿರತ್ನ ವಿಚಾರದಲ್ಲೂ ಹಾಗೇ ಆಗಿದೆ. ಶಾಸಕರು, ಗುತ್ತಿಗೆದಾರರು, ಅಧಿಕಾರಿಗಳಿಗೆ ಇಷ್ಟೆಲ್ಲಾ ಆಗುತ್ತಿದೆ. ಈ ಹಿಂದೆ ಈಶ್ವರಪ್ಪ ಅವರ ರಾಜೀನಾಮೆ ತಗೊಂಡ್ರು. ಗಣಪತಿ ವಿಚಾರದಲ್ಲಿ ಕೆಜೆ ಜಾರ್ಜ್ ರಾಜೀನಾಮೆ ಕೊಟ್ಟಿದ್ರು.
ಸಾಮಾಜಿಕ ಜಾಲತಾಣದಲ್ಲಿ ಸಚಿನ್ ಪೋಸ್ಟ್ ಹಾಕಿದ್ದ. ಈ ವಿಚಾರದಲ್ಲಿ ಸಹೋದರಿಯರು ಠಾಣೆಗೆ ಹೋಗಿ ದೂರು ಕೊಟ್ರೂ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡು ಪ್ರಯತ್ನಿಸಿದ್ರೆ ಸಚಿನ್ ಬಹುಶ ಬದುಕುಳಿಯುತ್ತಿದ್ದ ಅವರ ಸಹೋದರಿಯರ ಬಗ್ಗೆಯೇ ಪೊಲೀಸರು ಕೆಟ್ಟದಾಗಿ ಮಾತನಾಡಿ ಕಳಿಸಿದ್ದಾರೆ. ಬೀದರ್, ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಗಳೆಲ್ಲಾ ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ಜನ ಮಾತನಾಡ್ತಿದ್ದಾರೆ ಎಂದು ರೆಡ್ಡಿ ಕಿಡಿಕಾರಿದರು.