Advertisement

ಅಧಿಕಾರ ಹಸ್ತಾಂತರಿಸದ ಕಾಂಗ್ರೆಸ್‌; ಸಾಂಕೇತಿಕ ಪ್ರತಿಭಟನೆ

05:30 PM Mar 18, 2022 | Team Udayavani |

ನವಲಗುಂದ: ಅವಧಿ ಮುಗಿದು ಎರಡು ತಿಂಗಳು ಗತಿಸಿದರೂ ಹೊಂದಾಣಿಕೆಯಂತೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಅಧಿಕಾರ ಹಸ್ತಾಂತರಿಸುತ್ತಿಲ್ಲ, ಮಾತಿನಂತೆ ನಡೆದುಕೊಳ್ಳುತ್ತಿಲ್ಲವೆಂದು ಬಿಜೆಪಿಯ ಆರು ಜನ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಗುರುವಾರ ಪುರಸಭೆ ಅಧ್ಯಕ್ಷರ ಕಾರ್ಯಾಲಯ ಮುಂದೆ ಗಾಂ ಧೀಜಿಯವರ ಭಾವಚಿತ್ರವಿಟ್ಟು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

Advertisement

ಆಶ್ರಯ ಸಮಿತಿ ಸದಸ್ಯ ರಾಯನಗೌಡ ಪಾಟೀಲ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ 7 ಜನ ಕಾಂಗ್ರೆಸ್‌ ಸದಸ್ಯರು, 6 ಜನ ಬಿಜೆಪಿ ಸದಸ್ಯರು ಸೇರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಅವರಿಗೆ ಬಿಟ್ಟು ಕೊಟ್ಟು ಇನ್ನು ಕೇವಲ ಸ್ಥಾಯಿ ಸಮಿತಿ ಸ್ಥಾನ ಮಾತ್ರ ಬಿಜೆಪಿ ನಿರ್ವಹಿಸಿ ಈಗ ಅವಧಿ ಮುಗಿದರೂ ಅಧಿಕಾರ ಹಸ್ತಾಂತರಿಸದೇ ಕುಂಟು ನೆಪ ಹೇಳುತ್ತಿದ್ದಾರೆ. ಕಾಂಗ್ರೆಸ್‌ ಸದಸ್ಯರು ಒಪ್ಪಂದದಂತೆ ಬಿಜೆಪಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ನೀಡಿ ಮಾತು ಉಳಿಸಿಕೊಳ್ಳಬೇಕು.ಇಲ್ಲವಾದರೆ ಮಾ-21ರಂದು ಪುರಸಭೆ ಕಾರ್ಯಾಲಯ ಮುಂದೆ ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.

ಕಾಂಗ್ರೆಸ್‌ ತಾಲೂಕಾ ಬ್ಲಾಕ್‌ ಅಧ್ಯಕ್ಷರಾದ ವರ್ಧಮಾನಗೌಡ ಹಿರೇಗೌಡರ ಗಮನಕ್ಕೂ ತಂದರೂ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು. ಪುರಸಭೆಯ ಬಿಜೆಪಿ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಹಾಗೂ ಆಶ್ರಯ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಸದಸ್ಯರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಕಟ್ಟಿಮನಿ, ಪುರಸಭೆ ಸದಸ್ಯರಾದ ಶರಣಪ್ಪ ಹಕ್ಕರಕಿ, ಮಹಾಂತೇಶ ಕಲಾಲ, ವಿಜಯಾ ಕಲಾಲ, ಸುಮಂಗಲಾ ಬೆಂಡಿಗೇರಿ, ಜ್ಯೋತಿ ಗೊಲ್ಲರ, ಪ್ರಭು ಇಬ್ರಾಹಿಂಪೂರ, ಬಸವರಾಜ ಕಾತರಕಿ, ಎಮ್‌.ಪಿ.ತೋಟಿ, ಅಡಿವೆಪ್ಪ ಶಿರಸಂಗಿ, ಗೀತಾ ಜಿನ್ನರ, ನಾಗೇಶ ಬೆಂಡಿಗೇರಿ, ಸಿದ್ದಪ್ಪ ಜಿನ್ನರ, ರಾಜು ಜಾಲಿಹಾಳ, ಮಾರುತಿ ಗೊಲ್ಲರ, ಶಮಸುದ್ದೀನ ಕಿರೇಸೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next