ಸುಳ್ಯ: ಎಡಮಂಗಲ ಗ್ರಾಮದ ಡೆಕ್ಕಳ ನಿವಾಸಿ ದಿನೇಶ್ ಅವರ ಪತ್ನಿ ಶೀಲಾವತಿ (38) ಅವರು ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಡಿ. 18ರಂದು ನಿಧನ ಹೊಂದಿದರು.
ದಿನೇಶ್ ಅವರನ್ನು 13 ವರ್ಷಗಳ ಹಿಂದೆ ಮದುವೆಯಾಗಿದ್ದ ಶೀಲಾವತಿ ಅವರಿಗೆ ಮಕ್ಕಳಾಗಿರಲಿಲ್ಲ. ಶೀಲಾವತಿ ಅವರು ಇತ್ತೀಚೆಗೆ ಮಗು ಆಗುವ ಚಿಕಿತ್ಸೆ ಪಡೆದುಕೊಂಡಿದ್ದರು. ಆರೋಗ್ಯ ಸರಿಯಿಲ್ಲದ ಹಿನ್ನೆಲೆಯಲ್ಲಿ ವಾರದ ಹಿಂದೆ ತವರು ಮನೆಯಾದ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿಗೆ ತೆರಳಿದ್ದರು.
ಡಿ.18ರಂದು ಶೀಲಾವತಿ ಅವರಿಗೆ ಅಸೌಖ್ಯ ಉಂಟಾದ ಹಿನ್ನೆಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಂತೆ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.