Advertisement

Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ

01:58 PM Dec 05, 2024 | Team Udayavani |

ಯಾದಗಿರಿ: ರಾಜ್ಯ ಕಾಂಗ್ರೆಸ್ ದುಷ್ಟ ಸರಕಾರ ಹಾಗೂ ಮುಖ್ಯಮಂತ್ರಿಗಳಿಂದ ರಾಜ್ಯದ ಮಠ, ಮಂದಿರ ಹಾಗೂ ಸಾರ್ವಜನಿಕರ ಆಸ್ತಿಗಳನ್ನು ವಕ್ಫ್ ಮುಖೇನ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದ್ದು, ಅದರ ವಿರುದ್ಧ ರಾಜ್ಯ ಬಿಜೆಪಿ ಹೋರಾಟ ನಿರಂತರವಾಗಿರುತ್ತದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.

Advertisement

ಗುರುವಾರ ಶಹಾಪುರ ನಗರದ ಸಿಬಿ ಕಮಾನ್ ನಿಂದ ಬಸವೇಶ್ವರ ವೃತ್ತದವರೆಗೆ ವಕ್ಫದ ವಿರುದ್ಧ ಪ್ರತಿಭಟನೆ ನಡೆಸಿ, ನಮ್ಮ ಭೂಮಿ‌ ನಮ್ಮ ಹಕ್ಕು ವಿಶೇಷ ಅಭಿಯಾನದ ಕುರಿತು ಮಾತನಾಡಿದರು.

ರಾಜ್ಯದಲ್ಲಿರುವ ಸರ್ಕಾರದಿಂದ ರೈತರು ಕಣ್ಣೀರಾಕುವ ಸ್ಥಿತಿ ಬಂದಿದೆ. ಅನ್ನದಾತರ ಪರವಾಗಿ ಬಿಜೆಪಿ ಪಕ್ಷ ಸದಾ ಬೆನ್ನಿಗೆ ಇರುತ್ತದೆ. ಆದಕಾರಣ ಇಂದು ನಮ್ಮ ಭೂಮಿ-ನಮ್ಮ ಹಕ್ಕು ಹೋರಾಟ ನಡೆಸುತ್ತಿದ್ದೇವೆ ಎಂದರು.

1973-74ರ ಗೆಜೆಟಿಯರ್ ನೆಪ ಮಾಡಿಕೊಂಡು ಕಾಂಗ್ರೆಸ್ ಸರಕಾರ ಕೆಲವರ ಕುಮ್ಮಕ್ಕಿನಿಂದ ರೈತರ ಜಮೀನಿನಲ್ಲಿ ವಕ್ಫ್ ಎಂದು ಸೇರಿಸಿ ರಾಜಕೀಯ ಮಾಡುತ್ತಿರುವುದು ನಾಚಿಕೆಯ ಸಂಗತಿಯಾಗಿದೆ ಎಂದು ಆಕ್ರೋಶಗೊಂಡರು.

ಅನ್ನವನ್ನಿಕ್ಕುವ ರೈತರಿಗೆ ನೋಟಿಸ್ ನೀಡುವ ಈ ಸರ್ಕಾರಕ್ಕೆ ರಾಜ್ಯದ ಜನರು ಎಂದಿಗೂ ಕ್ಷಮಿಸುವುದಿಲ್ಲ. ಸಿದ್ದರಾಮಯ್ಯನವರೇ ರಾಜ್ಯದ ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಗುಡಿಗಿದರು.

Advertisement

ರಾಜ್ಯದ ರೈತರ‌ ಕಣ್ಣಲ್ಲಿ ನೀರು ಬಂದರೆ ಖಂಡಿತವಾಗಿಯೂ ಸಿದ್ದರಾಮಯ್ಯನವರೆ ನಿಮಗೆ ಶಾಪ‌ ತಟ್ಟುತ್ತದೆ. ನಿಮ್ಮ ಮುಖ್ಯಮಂತ್ರಿ ಸ್ಥಾನ ಉಳಿಯುವುದಿಲ್ಲ. ಏನು ಸಾಧನೆ ಮಾಡಿದ್ದೀರಾ ಎಂದು ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದೀರಾ ಎಂದು ವಿಜಯೇಂದ್ರ ಟೀಕಿಸಿದರು.

ಸಿದ್ದರಾಮಯ್ಯನವರು ರಾಜ್ಯದ ರೈತರ ವಿರೋಧಿಯಾಗಿದ್ದಾರೆ. ರೈತರ ಸಾಲ ಮನ್ನಾ, ಬೆಳೆ ಪರಿಹಾರ ಮಾಡಲು ಆಗುವುದಿಲ್ಲ. ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ಯಡಿಯೂರಪ್ಪ ನವರು ಕೆಲಸ ಮಾಡಿದ್ದಾರೆ ಎಂದರು.

ಯಡಿಯೂರಪ್ಪನ ಮಗನಾಗಿ,‌ ನಿಮ್ಮ‌ ಮನೆ ಸೇವಕನಾಗಿ ಹೇಳುತ್ತಾ ಇರುವೆ ರಾಜ್ಯದ ರೈತರ ಜಮೀನು ಹೋಗಲು ನಾನು ಬಿಡುವುದಿಲ್ಲ ಎಂದು ಆಕ್ರೋಶ ಭರಿತವಾಗಿ ಭರವಸೆ ಮಾತುಗಳಾಡಿದರು.

ರೈತರಿಗೆ ಅನ್ಯಾಯವಾಗದಂತೆ ನಮ್ಮ ಹೋರಾಟ ನಿರಂತವಾಗಿರುತ್ತದೆ. ರಾಜ್ಯದ ಏಳಿಗಾಗಿ, ರೈತರ ಹಿತರಕ್ಷಣೆಗಾಗಿ ಎಂಥಹ‌ ನಿರ್ಧಾರಕ್ಕೂ ನಾನು ಸಿದ್ಧನಾಗಿದ್ದೇನೆ ಎಂದರು.

ಇದನ್ನೂ ಓದಿ: Koppala: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ಕೊಪ್ಪಳದಲ್ಲಿ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next