ಸುರಪುರ: ನಗರದ ಬಿಜೆಪಿ ಕಚೇರಿಯಲ್ಲಿ ತಾಲೂಕಿನ ಸೊನ್ನಾಪುರ ತಾಂಡದ ಕಾಂಗ್ರೆಸ್ ಪಕ್ಷದ ಕೆಲವರು ರವಿವಾರ ಮಾಜಿ ಸಚಿವ ರಾಜುಗೌಡ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ನಂತರ ಮಾಜಿ ಸಚಿವ ರಾಜುಗೌಡ ಮಾತನಾಡಿ, ತಾಲೂಕಿನ ಕಾಂಗ್ರೆಸ್ ಆಡಳಿತ ದಿಂದ ಜನರು ಭ್ರಮ ನಿರಶನರಾಗಿದ್ದಾರೆ. ಗ್ರಾಮಗಳ ಸುಧಾರಣೆಗೆ ಸರಕಾರದಿಂದ ಸಾಕಷ್ಟು ಅನುದಾನ ಬಂದರೂ ಸಮರ್ಪವಾಗಿ ಬಳಕೆಯಾಗಿಲ್ಲ. ವಿವಿಧ ಯೋಜನೆಗಳು ಜನರಿಗೆ ತಲುಪದೆ ಉಳ್ಳವರ ಪಾಲಾಗಿವೆ. ಹೀಗಾಗಿ ತಾಲೂಕಿನಲ್ಲಿ ಅಭಿವೃದ್ಧಿ
ಶೂನ್ಯವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಪ್ರಧಾನಿ ಮೋದಿ ಅವರ ಅಲೆ ಇದೆ. ಹಲವಾರು ಜನಪರ ಯೋಜನೆ ಜಾರಿಗೊಳ್ಳಿಸಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಯಡಿಯೂರಪ್ಪನವರು ಒಳ್ಳೆ ಆಡಳಿತ ನೀಡಿದ್ದಾರೆ. ಹಲವಾರು ಯೋಜನೆ ಜಾರಿ ಮಾಡುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಹೀಗಾಗಿ ಬಿಜೆಪಿಯಿಂದ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯ. ಕಾರಣ ಈ ಬಾರಿ ಬಿಜೆಪಿಯನ್ನು ಬೆಂಬಲಿಸಿ ಎಂದು ಕರೆ ನೀಡಿದರು.
ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು. ಈ ಹಿಂದೆ ಅಧಿಕಾರದಲ್ಲಿದ್ದಾಗ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ತಿಳಿಸಿಕೊಡಬೇಕು. ಪ್ರತಿ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಅಭಿವೃದ್ಧಿ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪ್ರತಿ ಮನೆಯನ್ನು ಬಿಜೆಪಿ ಮನೆಯನ್ನಾಗಿ ಪರಿವರ್ತಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಈಶ್ವರಪ್ಪ ಚವ್ಹಾಣ, ಮುರೇಳ ರಾಠೊಡ, ಮೋತೆಪ್ಪ ಚವ್ಹಾಣ, ವಾಲಪ್ಪ ಚವ್ಹಾಣ, ಬಸವರಾಜ ಚವ್ಹಾಣ, ಲಿಂಬಣ್ಣ ಚವ್ಹಾಣ, ಡಾಕಪ್ಪ ಚವ್ಹಾಣ, ಧೀರಪ್ಪ ಚವ್ಹಾಣ, ಗೋವಿಂದ ಚವ್ಹಾಣ, ಶಿವಪ್ಪ ಚವ್ಹಾಣ, ಕಲ್ಲಪ್ಪ ಚವ್ಹಾಣ, ಮೋತಿಲಾಲ ರಾಠೊಡ ಇನ್ನು ಅನೇಕ ಜನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.