Advertisement

Hubli: ಕಾಂಗ್ರೆಸ್‌ನವರಿಂದ ಹಾವು ತೋರಿಸಿ ಹೆದರಿಸುವ ಕೆಲಸ: ಶಾಸಕ ರಾಜುಗೌಡ

02:20 PM Nov 10, 2024 | Team Udayavani |

ಹುಬ್ಬಳ್ಳಿ: ಕೋವಿಡ್ ಸಮಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪರು ಒಳ್ಳೆಯ ಕೆಲಸ ಮಾಡುವ ಮೂಲಕ ರಾಜ್ಯದ ಜನರ ಜೀವರಕ್ಷಣೆ ಮಾಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಇಲ್ಲದಿದ್ದರೆ ಯಾವ ಪರಿಸ್ಥಿತಿ ಬರುತ್ತಿತ್ತು. ಈಗ ಕಾಂಗ್ರೆಸ್‌ನವರು ಹಾವು ತೋರಿಸಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ರಾಜುಗೌಡ ಕುಟುಕಿದರು.

Advertisement

ಯಡಿಯೂರಪ್ಪ ಮತ್ತು ರಾಮುಲು ಮೇಲೆ ಕ್ರಿಮಿನಲ್ ಕೇಸ್ ವಿಚಾರವಾಗಿ ರವಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಹಳಷ್ಟು ದಿನದಿಂದ ಈ ಬೆದರಿಕೆ ಹಾಕುತ್ತಿದ್ದಾರೆ. ಕಾಂಗ್ರೆಸ್‌ ನವರದ್ದೆ ಸಾಕಷ್ಟು ಹಗರಣಗಳಿವೆ. ಅವರ ಕಾಟಕ್ಕೆ ಸಾಕಷ್ಟು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.‌ ಈ ರೀತಿ ಬೆದರಿಕೆ ಹಾಕಿದರೆ ಬಿಜೆಪಿ ನಾಯಕರು ಸುಮ್ಮನಾಗುತ್ತಾರೆಂದು ತಿಳಿದಿದ್ದಾರೆ ಎಂದು ಹರಿಹಾಯ್ದರು.

ಕೋವಿಡ್ ವೇಳೆ ಹಗರಣವಾಗಿದ್ದರೆ ಇಷ್ಟು ದಿನ ಯಾಕೆ ಸುಮ್ಮನೆ ಕುಳಿತಿದ್ದರು. ಅವರು ಅಧಿಕಾರಕ್ಕೆ ಬಂದು ಎಷ್ಟು ದಿನ ಆಯ್ತು. ಅವರದು ಸಂತೆಗಳಲ್ಲಿ ಹಾವಾಡಿಸುವಂತಾಗಿದೆ. ಹಾವು ತೋರಿಸುತ್ತೇನೆ ಎನ್ನುತ್ತಲೇ ಕೊನೆವರೆಗೂ ತೋರಿಸುತ್ತಿರಲಿಲ್ಲ ಹಾಗಾಗಿದೆ ಅವರ ಸ್ಥಿತಿ. ನಿಮ್ಮ ಕೈ ಯಾರು ಕಟ್ಟಿ ಹಾಕಿರುವುದು.‌ ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ 187ಕೋಟಿ ಅಲ್ಲಾ 87 ಕೋಟಿ ಅಂತ ಒಪ್ಪಿಕೊಂಡಿದ್ದಾರೆ.‌ ಅವರ ಹಗರಣಗಳು ಬಹಳಷ್ಟಿವೆ ಬಿಜೆಪಿದೇನು ಇಲ್ಲ ಎಂದು ಕುಟುಕಿದರು.

ಲಾಕ್‌ಡೌನ್‌ ನಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾವ ಬಿಲ್ ಪೆಂಡಿಂಗ್ ಇಟ್ಟಿರಲಿಲ್ಲ. ಈಗ ಯಾವ ಕೆಲಸವೂ ಆಗುತ್ತಿಲ್ಲ, ಎಲ್ಲಾ ಬಿಲ್ ಪೆಂಡಿಂಗ್ ಇದೆ ಎಂದರು.

ವಕ್ಫ್ ನಮ್ಮ ಜಿಲ್ಲೆ ಮಾತ್ರವಲ್ಲ ಎಲ್ಲಾ ಕಡೆಗಳಲ್ಲೂ ಆಗಿದೆ. ನೋಟಿಸ್ ವಾಪಸ್ಸು ಪಡೆದಿದ್ದೇವೆ ಎನ್ನುತ್ತಾರೆ.‌ ಆದರೆ ವಕ್ಫ್ ಎಂದು ಬಂದಮೇಲೆ ಯಾರು ಆ ಜಾಗ ಕೊಂಡುಕೊಳ್ಳುತ್ತಾರೆ? ಸಿಎಂ, ಡಿಸಿಎಂ ಆದೇಶ ಮಾಡಿದರೆ ಅಧಿಕಾರಿಗಳು ಗಮನ ಹರಿಸಬೇಕು. ರಾಜಕಾರಣಿಗಳು ಅಧಿಕಾರಿಗಳಿಗೆ ಬಹಳವಾದರೆ ವರ್ಗಾವಣೆ ಮಾಡಬಹುದು ಅಷ್ಟೇ ಎಂದರು.

Advertisement

ಬಿಜೆಪಿಯಲ್ಲಿ ಬಣಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮದು ಒಬ್ಬರ ಪಕ್ಷ ಅಲ್ಲ. ಪ್ರಜಾಪ್ರಭುತ್ವ ನಂಬಿದ ಪಕ್ಷ. ಹೀಗಾಗಿ ನಾವು ನಮ್ಮ ನಾಯಕರ ಕಾಲು ನಾವೇ ಎಳಿಯುತ್ತೇವೆ. ಆದರೆ, ಕಾಂಗ್ರೆಸ್‌ನವರು ಒಬ್ಬರ ಹಿಡಿತದಲ್ಲಿದ್ದಾರೆ ಎಂದು ಕುಟುಕಿದರು.

ಅಬಕಾರಿ ಇಲಾಖೆ ಹಗರಣ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಒಂದೊಂದು ವೈನ್ ಶಾಪ್ ಇಷ್ಟು ಹಣ ಕೊಡಲೇಬೇಕು ಅಂದಾಗ ಅವರು ಎಲ್ಲಿಂದ ಕೊಡುತ್ತಾರೆ. ಕೊಡದಿದ್ದರೆ ವೈನ್ ಶಾಪ್ ಮೇಲೆ ದಾಳಿ ಮಾಡುತ್ತಾರೆ. ನಮಗೆ ದುಡ್ಡು ಬೇಕೇ ಬೇಕೆಂದು ಟಾರ್ಗೆಟ್ ಫಿಕ್ಸ್ ಮಾಡುತ್ತಾರೆ. ಹೀಗೆ ಬಹಳಷ್ಟು ಜನರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದರು.

ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಗಾಗಿ ಕಾಂಗ್ರೆಸ್ ಸರ್ಕಾರವೇ ಇಲ್ಲಿ ಬಂದು ಕುಳಿತಿದೆ. ಒಂದು ಪಂಚಾಯತಿಗೆ ಒಬ್ಬ ಸಚಿವ, ಶಾಸಕ ಬಂದು ಕುಳಿತಿದ್ದಾರೆ. ಪಂಚಾಯಿತಿಗೆ ಅಲ್ಲ. ಮನೆಗೆ ಒಬ್ಬ ಮಿನಿಸ್ಟರ್ ಕೂತರು ಭರತ್ ಬೊಮ್ಮಯಿ ಗೆಲ್ಲುತ್ತಾರೆ. ಕಾಂಗ್ರೆಸ್‌ನವರು ಹಣದ ಹೊಳೆ ಹರಿಸುತ್ತಿದ್ದಾರೆ.‌ ಏನೇ ಹರಸಿದರೂ ಬಿಜೆಪಿ ಗೆಲುವು ತಡೆಯಲು ಸಾಧ್ಯವಿಲ್ಲ ಎಂದರು

Advertisement

Udayavani is now on Telegram. Click here to join our channel and stay updated with the latest news.

Next