Advertisement

ಕಾವೇರಿ ನಿರ್ವಹಣಾ ಮಂಡಳಿ: ಸರ್ಕಾರ ನಿರ್ಲಕ್ಷ್ಯ

07:00 AM Jun 25, 2018 | Team Udayavani |

ಹುಬ್ಬಳ್ಳಿ: ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರದಲ್ಲಿ ರಾಜ್ಯ ಸರಕಾರ ತೋರಿದ ನಿರ್ಲಕ್ಷ್ಯದ ಪರಿಣಾಮ ಇಂತಹ ಸ್ಥಿತಿ ಬಂದೊದಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ನಿರ್ವಹಣಾ ಮಂಡಳಿ ಕುರಿತು ಕೇಂದ್ರ ಸರಕಾರ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಯಾರು ಸಿಎಂ ಆಗ ಬೇಕು, ಡಿಸಿಎಂ ಪಟ್ಟ ಯಾರಿಗೆ, ಯಾರ್ಯಾರಿಗೆ ಸಚಿವ ಸ್ಥಾನ ನೀಡಬೇಕು. ಭಿನ್ನಮತ ಹಾಗೂ ಅತೃಪ್ತರನ್ನು ಸಮಾಧಾನ ಮಾಡುವುದರಲ್ಲೇ ಕಾಲ ಕಳೆದರು. ಕಾವೇರಿ ಸಂಬಂಧ ಪ್ರಧಾನಿಯನ್ನು ಭೇಟಿಯಾಗುವ ಕನಿಷ್ಠ ಪ್ರಜ್ಞೆ ಕೂಡ ರಾಜ್ಯ ಸರಕಾರಕ್ಕಿರಲಿಲ್ಲ. ಈ ವಿಚಾರದಲ್ಲಿ ರಾಜ್ಯ ಸರಕಾರ, ಸುಪ್ರಿಂ ಆಜ್ಞೆಯನ್ನು ಚಾಲೇಂಜ್‌ ಮಾಡುವ ಗೋಜಿಗೆ ಹೋಗಲಿಲ್ಲ. ಕೊನೆಗೆ ತಗಾದೆ ತೆಗೆದರೆ ಏನು ಪ್ರಯೋಜನ? ಇವರಿಗೆ ಸ್ಥಾನಮಾನವೇ ಹೆಚ್ಚಾಗಿತ್ತು. ರಾಜ್ಯದ ಹಿತಾಸಕ್ತಿ ಅಗತ್ಯವಾಗಿರಲಿಲ್ಲ. ಸಮಿತಿಗೆ ನಾಮ ನಿರ್ದೇಶನ ಮಾಡುವಲ್ಲೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next